

ಮೂಲ್ಕಿ: ಯುವ ಮನಸ್ಸುಗಳನ್ನು ಸಂಘಟನೆಯತ್ತ ಸೆಳೆಯಲು ಕ್ರೀಡೆ ಪೂರಕವಾಗಿದೆ ಎಂದು ಕುಳಾಯಿ ಉದ್ಯಮಿ ಮುತ್ತು ಸೆಲ್ವಂ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಶ್ರೀ ನಾರಾಯಣ ಗುರು ಸೇವಾದಳದ ಆಶ್ರಯದಲ್ಲಿ ಶ್ರೀ ನಾರಾಯಣಗುರು ಟ್ರೋಫಿ ವಾಲಿಬಾಲ್ ಪಂದ್ಯಾಟವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘ ಅಧ್ಯಕ್ಷ ವಾಮನ್ ಕೋಟ್ಯಾನ್ ನಡಿಕುದ್ರು ಅಧ್ಯಕ್ಷತೆ ವಹಿಸಿದ್ದರು.
ಕೊಲಕಾಡಿ ಉದ್ಯಮಿ ವಾಸು ಪೂಜಾರಿ ಮಾತನಾಡಿ, ಯುವ ಜನತೆ ಕ್ರೀಡೆಯೊಂದಿಗೆ ಸಂಘಟಿತರಾಗಿ ಸಮಾಜದ ದೀನ ಜನರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಮೂಲ್ಕಿ ಉದ್ಯಮಿ ಶಶಿಧರ್ ಕೋಟ್ಯಾನ್, ಬಿರುವರ್ ಕುಡ್ಲ ಮೂಲ್ಕಿ ಘಟಕ ಅಧ್ಯಕ್ಷ ಕಿಶೋರ್ ಸಾಲ್ಯಾನ್, ಉದ್ಯಮಿ ಶಶೀಂದ್ರ ಕೋಟ್ಯಾನ್, ಕೆ.ಎಸ್.ರಾವ್ ನಗರ ಸಂಘ ಅಧ್ಯಕ್ಷ ಮಹಾಬಲ ಅಮೀನ್, ಜನಾರ್ದನ ಬಂಗೇರ, ಅತಿಕಾರಿಬೆಟ್ಟು ಗ್ರಾ.ಪಂ.ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಉದ್ಯಮಿ ಚರಣ್ ಕೊಳಚಿಕಂಬಳ, ಮೂಲ್ಕಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಜಯ ಕುಮಾರ್ ಕುಬೆವೂರು, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ಯದೀಶ್, ರಮಾನಾಥ ಸುವರ್ಣ, ತಾರಾನಾಥ ಎನ್., ಶಂಕರ್ ಪಡುಬೈಲು, ಸೇವಾದಳದ ದಳಪತಿ ಶಶಿಕಾಂತ್ ಸುವರ್ಣ, ಉಪದಳಪತಿ ರಾಜೇಶ್ ಬಿ.ಅಮೀನ್, ಕಾರ್ಯದರ್ಶಿ ಅಶ್ವಿನ್ ಉಪಸ್ಥಿತರಿದ್ದರು.
ಉಮೇಶ್ ಮಾನಂಪಾಡಿ ಸ್ವಾಗತಿಸಿದರು. ಸತೀಶ್ ಕಿಲ್ಪಾಡಿ ನಿರೂಪಿಸಿದರು. ಗಿರಿಧರ್ ಅಮೀನ್ ವಂದಿಸಿದರು.
ಬಹುಮಾನ ವಿತರಣೆ
ಶ್ರೀ ನಾರಾಯಣಗುರು ಟ್ರೋಫಿ ವಾಲಿಬಾಲ್ ಪಂದ್ಯಾಟ ಪ್ರಥಮ ಪ್ರಶಸ್ತಿ ಮಾನಂಪಾಡಿ (ಎ), ದ್ವಿತೀಯ ಪ್ರಶಸ್ತಿ ಮಾನಂಪಾಡಿ (ಬಿ), ತೃತೀಯ ಪ್ರಶಸ್ತಿ ಕೆ.ಎಸ್ ರಾವ್ ನಗರ ತಂಡ ಗಳಿಸಿತು. ಆಲ್‌ರೌಂಡರ್ ಪ್ರಶಸ್ತಿ ಮಾನಂಪಾಡಿ (ಎ)ತಂಡದ ಪ್ರಮೋದ್, ಬೆಸ್ಟ್ ಅಟೇಕರ್ ಆಗಿ ಮಾನಂಪಾಡಿ (ಎ)ತಂಡದ ಗಿರೀಶ್ ಪಡೆದರು.