ಕ್ರೀಡೆಯಿಂದ ಯುವ ಜನಾಂಗ ಸಂಘಟಿತ : ಯಜ್ಞೇಶ್ ಆಚಾರ್ ಹೇಳಿಕೆ

New Project (4)
Published on

ಸುಬ್ರಹ್ಮಣ್ಯ: ವಾಲಿಬಾಲ್ ಗ್ರಾಮೀಣ ಕ್ರೀಡೆಯಾಗಿದ್ದು, ಎಲ್ಲ ವಯೋಮಿತಿಯವರು ಭೇದಭಾವ ಇಲ್ಲದೆ ಉತ್ಸಾಹದಿಂದ ಆಡುವ ಕ್ರೀಡೆಯಾಗಿದೆ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಇಂತಹ ಪಂದ್ಯಾಟಗಳು ಅವಶ್ಯಕ. ಯುವ ಜನಾಂಗ ಸಮ್ಮಿಲನಗೊಂಡು ಸಂಘಟಿತರಾಗಲು ಪಂದ್ಯಾಟಗಳು ಅಡಿಗಲ್ಲು ಎಂದು ಕಲಾವಿದ ಕೆ.ಯಜ್ಞೇಶ್ ಆಚಾರ್ ಹೇಳಿದರು.

ಕುಕ್ಕೆ ಫ್ರೆಂಡ್ಸ್ ಸುಬ್ರಹ್ಮಣ್ಯ ಹಾಗೂ ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶಯದಲ್ಲಿ ಎರಡನೇ ವರ್ಷದ ಆಹ್ವಾನಿತ ಎಂಟು ತಂಡಗಳ ಲೀಗ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.

ಕುಕ್ಕೆ ಫ್ರೆಂಡ್ಸ್ ಅಧ್ಯಕ್ಷ ಶಬರೀಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ರಾಜೇಶ್ ಎನ್.ಎಸ್, ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್, ನಿಕಟಪೂರ್ವ ತಾ.ಪಂ.ಅಶೋಕ ನೆಕ್ರಾಜೆ, ಸಮಾಜ ಸೇವಕ ಡಾ.ರವಿ ಕಕ್ಕೆಪದವು, ದೈಹಿಕ ಶಿಕ್ಷಣ ನಿರ್ದೇಶಕ ರಾಧಾಕೃಷ್ಣ ಚಿದ್ಗಲ್ಲು, ದೇವಳದ ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಪವನ್ ಎಂ.ಡಿ, ನಿವೃತ್ತ ಪೊಲೀಸ್ ಅಧಿಕಾರಿ ಅಚ್ಚುತ್ತ ಗೌಡ.ಕೆ, ಗ್ರಾಮ ಲೆಕ್ಕಾಧಿಕಾರಿ ಹರೀಶ್ ಉಪಸ್ಥಿತರಿದ್ದರು.

ಕುಕ್ಕೆ ಫ್ರೆಂಡ್ಸ್‌ನ ಉಪಾಧ್ಯಕ್ಷ ಜೀವನ್, ಕಾರ್ಯದರ್ಶಿ ರತಿನ್, ಕೋಶಾಧಿಕಾರಿ ಹರ್ಷಿತ್ ಡಿ.ವಿ., ನಿಕಟಪೂರ್ವಾಧ್ಯಕ್ಷ ಭವಿಷ್, ಸದಸ್ಯರುಗಳಾದ ಗೋಪಾಲಕೃಷ್ಣ, ಬಿವಿನ್, ಜಯೇಶ್ ಹಾಗೂ ಯಶ್ವಂತ್ ಉಪಸ್ಥಿತರಿದ್ದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ನಿರೂಪಿಸಿ ವಂದಿಸಿದರು.

ಗೌರವಾರ್ಪಣೆ

ಯುವ ತೇಜಸ್ ಟ್ರಸ್ಟ್, ರವಿ ಕಕ್ಕೆಪದವು ಸಮಾಜ ಸೇವ ಟ್ರಸ್ಟ್ ಹಾಗೂ ಕುಕ್ಕೆ ಸರ್ಕಲ್‌ನ ಸಾಧಕರನ್ನು ಗೌರವಿಸಲಾಯಿತು. ರಾಜ್ಯಮಟ್ಟದ ಕ್ರೀಡಾ ಪ್ರತಿಭೆಗಳಾದ ಚಾಣಸ್ಯ, ಸುಪ್ರಿಯಾ, ಪ್ರತೀಕ್ಷಾ, ಯಜ್ಞೇಶ್, ರಚನ್, ಪಲ್ಲವಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net