

ಚಿತ್ರದುರ್ಗ: ಜಿಲ್ಲಾ ಕ್ರೀಡಾಂಗಣದ ವಾಲಿಬಾಲ್ ಅಂಕಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಫೋರ್ಟ್ ಕ್ಲಬ್‌ನಿಂದ ಆ. 31ರಂದು ನಗರ ಮಟ್ಟದ ಸ್ವಾತಂತ್ರೊೃೀತ್ಸವ ವಾಲಿಬಾಲ್ ಕಪ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಪ್ರಾಥಮಿಕ ಶಾಲೆಯ ಬಾಲಕರು, ಪ್ರೌಢಶಾಲೆಯ ಬಾಲಕ-ಬಾಲಕಿಯರು ಭಾಗವಹಿಸಬಹುದು. ಆಸಕ್ತ ಕ್ರೀಡಾಪಟುಗಳು ಬೆಳಗ್ಗೆ 8.30ರೊಳಗೆ ಅಂಕಣದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಕ್ಲಬ್ ತಿಳಿಸಿದೆ.