ಮೈಸೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ವಾಲಿಬಾಲ್, ಥ್ರೋಬಾಲ್ ಪಂದ್ಯಾವಳಿ

Volleyball, Throwball Tournament at Saint Philomena's College, Mysore
Published on

ಮೈಸೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವತಿಯಿಂದ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ತಾಲೂಕು ಮಟ್ಟದ ಬಾಲಕರ ವಾಲಿಬಾಲ್, ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಗೆ ಬುಧವಾರ ಚಾಲನೆ ದೊರೆಯಿತು.

ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಮರಿಮಲ್ಲಪ್ಪ ಪ.ಪೂ. ಕಾಲೇಜು, ವಿವೇಕಾನಂದ ಪ.ಪೂ. ಕಾಲೇಜು, ಸದ್ವಿದ್ಯಾ ಸಂಯುಕ್ತ ಪ.ಪೂ. ಕಾಲೇಜು ಸಂತ ಫಿಲೋಮಿನಾ ಪ.ಪೂ. ಕಾಲೇಜು, ಗುರುಕುಲ ಪ.ಪೂ. ಕಾಲೇಜು, ದಕ್ಷ ಪ.ಪೂ. ಕಾಲೇಜು, ಬೇಸ್ ಪ.ಪೂ. ಕಾಲೇಜು, ಕೆಸರೆ ಸರ್ಕಾರಿ ಪ.ಪೂ. ಕಾಲೇಜು ಹಾಗೂ ಮಹಾರಾಜ ಪ.ಪೂ. ಕಾಲೇಜು ತಂಡಗಳು ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿವೆ.

ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಮರಿಮಲ್ಲಪ್ಪ ಪ.ಪೂ. ಕಾಲೇಜು, ಊಟಿ ರಸ್ತೆಯ ಜೆಎಸ್‌ಎಸ್ ಪ.ಪೂ. ಕಾಲೇಜು, ಟೆರಿಷಿಯನ್ ಪ.ಪೂ. ಕಾಲೇಜು, ಗೋಪಾಲಸ್ವಾಮಿ ಪ.ಪೂ. ಕಾಲೇಜು, ಪ್ರಮತಿ ಪ.ಪೂ. ಕಾಲೇಜು, ಸದ್ವಿದ್ಯಾ ಸಂಯುಕ್ತ ಪ.ಪೂ. ಕಾಲೇಜು, ವಿಜಯ ವಿಠಲ ಪ.ಪೂ. ಕಾಲೇಜು ತಂಡಗಳು ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿವೆ.

ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಫಾದರ್ ಡಾ. ಲೂರ್ದು ಪ್ರಸಾದ್ ಜೋಸೆಫ್, ಆಡಳಿತಾಧಿಕಾರಿ ಫಾದರ್ ಗ್ನಾನಪ್ರಗಾಸಂ, ಸಹಾಯಕ ರೆಕ್ಟರ್ ಫಾದರ್ ಡೇವಿಡ್ ಎಸ್. ಸಗಾಯರಾಜ್, ಪದವಿ ಕಾಲೇಜು ಪ್ರಾಂಶುಪಾಲ ಡಾ.ಜೆ.ಡಿ.ರವಿ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುನಿಲ್ ಡಿಸೋಜ, ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕ ಎಚ್.ಆರ್. ಮುರಳೀಧರ್, ಎಚ್.ಡಿ. ಕೋಟೆ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಹನುಮಂತು ರಾವ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net