ಇಂದು ವಾಲಿಬಾಲ್​ ಕ್ರೀಡೆ ಕಾರ್ಯಾಗಾರ

vijayavani logo
Award ceremony, official ceremony tomorrow
Published on

ವಿಜಯಪುರ: ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ಕನ್ನಡ ಅಧ್ಯಯನ ಭವನದಲ್ಲಿ ಫೆ.3 ರಂದು ಬೆಳಗ್ಗೆ 11ಕ್ಕೆ ವಾಲಿಬಾಲ್​ ಕ್ರೀಡೆ ಕುರಿತು ಮೂರು ದಿನಗಳ ಕಾರ್ಯಾಗಾರ ಮತ್ತು ನಿರ್ಣಾಯಕರ ಪರೀೆ ಉದ್ಘಾಟನಾ ಸಮಾರಂಭ ನಡೆಯಲಿದೆ.

ಮವಿವಿ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಕರ್ನಾಟಕ ವಾಲಿಬಾಲ್​ ಸಂಸ್ಥೆ ಉಪಾಧ್ಯಕ್ಷ ಭೀಮಸೇನ ಕೊಕರೆ ಭಾಗವಹಿಸಲಿದೆ. ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ. ಅಧ್ಯಕ್ಷತೆ ವಹಿಸುವರು.

ವಿವಿ ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್​.ಎಂ. ಚಂದ್ರಶೇಖರ, ಪ್ರೊ. ಡಿ.ಎಂ. ಜ್ಯೋತಿ, ಪ್ರೊ. ರಾಜಕುಮಾರ ಮಾಲಿಪಾಟೀಲ, ಪ್ರೊ. ಶ್ರೀನಿವಾಸ, ಪ್ರೊ. ಜ್ಯೋತಿ ಉಪಾದ್ಯೆ, ಡಾ. ಕಿರಣ ಜಿ.ಎನ್​., ಡಾ. ಅಶ್ವಿನಿ ಕೆ.ಎನ್​., ಕ್ರೀಡಾ ನಿರ್ದೇಶನಾಲಯದ ನಿರ್ದೇಶಕ ಡಾ. ಹನುಮಂತಯ್ಯ ಪೂಜಾರ, ಸಹ ನಿರ್ದೇಶಕ ವಿಶ್ವನಾಥ ನಡಕಟ್ಟಿ ಹಾಗೂ ಶಿಕ್ಷಣ ನಿಕಾಯ ಡೀನ್​ ಪ್ರೊ. ಸಕ್ಪಾಲ್​ ಹೂವಣ್ಣ ಉಪಸ್ಥಿತರಿರುವರು.

ಫೆ. 5 ರಂದು ಮಧ್ಯಾಹ್ನ 3ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಬೆಂಗಳೂರಿನ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಲಾಜಿ ಪ್ರಭು ಭಾಗವಹಿಸುವರು. ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ವಾಲಿಬಾಲ್​ ತರಬೇತುದಾರ ರಾಜೇಶ್​ ಪತ್ತಾರ ಹಾಗೂ ಕರ್ನಾಟಕ ವಾಲಿಬಾಲ್​ ಅಸೋಸಿಯೇಷನ್​ ಮತ್ತು ತೀರ್ಪುಗಾರರ ಮಂಡಳಿಯ ಸಂಚಾಲಕ ಕೆ. ವೆಂಕಟೇಶ್​ಗೌಡ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net