ಸಂಘಟನೆಯಿಂದ ಸಮಾಜಮುಖಿ ಕಾರ್ಯ : ಕರುಣಾಕರ ಶೆಟ್ಟಿ ಮಧ್ಯಗುತ್ತು ಆಶಯ

New Project (28)
Published on

ವಿಜಯವಾಣಿ ಸುದ್ದಿಜಾಲ ಗುರುಪುರ

ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಕಾರಣ ಕ್ರೀಡಾ ಚಟುವಟಿಕೆಗಳಿಗೆ ನಿರಂತರ ಸಹಕಾರ ನೀಡುತ್ತಾ ಬಂದಿದ್ದೇನೆ. ಕ್ರೀಡೆಯಂತೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. ಮುಂಬರುವ ದಿನಗಳಲ್ಲಿ ವೀರಕೇಸರಿ ಸಂಘಟನೆಯಿಂದ ಇನ್ನೂ ಹೆಚ್ಚಿನ ಸಮಾಜಪರ ಕೆಲಸಗಳಾಗಲಿ ಎಂದು ಉದ್ಯಮಿ ಮಧ್ಯಗುತ್ತು ಕರುಣಾಕರ ಶೆಟ್ಟಿ ಹೇಳಿದರು. ವೀರಕೇಸರಿ, ತಡಂಬೈಲ್- ಸುರತ್ಕಲ್ ಆಶ್ರಯದಲ್ಲಿ ಡಾ.ಮಂಜಯ್ಯ ಶೆಟ್ಟಿ ಗುಂಡಿಲಗುತ್ತು ಹಾಗೂ ಮಾಜಿ ಮೇಯರ್ ರಜನಿ ದುಗ್ಗಣ್ಣ ಅವರ ಸ್ಮರಣಾರ್ಥ ಸುರತ್ಕಲ್ ಬಂಟರ ಭವನದ ಬಳಿ ಶನಿವಾರ ಹೊನಲು ಬೆಳಕಿನ ವೀರಕೇಸರಿ ಟ್ರೋಫಿ ವಾಲಿಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್ ಅಧ್ಯಕ್ಷ ಸತೀಶ್ ಮಾತನಾಡಿದರು. ಬಿಎಸ್‌ಎಫ್‌ನ ಹಿರಿಯ ಪ್ರಬಂಧಕ ಸಂತೋಷ್ ಪೈ, ಡಾ.ಶಶಿರಾಜ್ ಶೆಟ್ಟಿ, ಅಂಜನಾ ಎಂ.ಶೆಟ್ಟಿ, ಯಜ್ಞೇಶ್ವರ ಬರ್ಕೆ, ಉದ್ಯಮಿ ಸತೀಶ್ ಮುಂಚೂರು, ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಬಂಟರ ಸಂಘ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲ್, ಉದ್ಯಮಿ ಸುಧಾಕರ ಪೂಂಜ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಟ್ರಸ್ಟಿ ಸಹನಾ ಆರ್.ರೈ, ಸಂಘಟನೆ ಗೌರವಾಧ್ಯಕ್ಷ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಸುಕುಮಾರ್ ತಡಂಬೈಲ್, ಕಾರ್ಯದರ್ಶಿ ರೂಪೇಶ್ ರೈ ಕೈಲಾಸ್ ತಡಂಬೈಲ್, ಪದ್ಮನಾಭ ಕರ್ಕೇರ, ರಾಘವೇಂದ್ರ ಶೆಟ್ಟಿ ತಡಂಬೈಲ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಮಧ್ಯಗುತ್ತು ಕರುಣಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ಡಾ.ಭರತ್ ಶೆಟ್ಟಿ, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಪಾಂಡುರಂಗ ಕೆ.ಪ್ರಭು ಕೊಡಿಪಾಡಿ, ಸುರತ್ಕಲ್ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್ ಉಪಸ್ಥಿತರಿದ್ದರು. ಅನೂಪ್ ಶೆಟ್ಟಿ ಪ್ರಾರ್ಥನೆಗೈದರು. ಅಶೋಕ್ ಶೆಟ್ಟಿ ತಡಂಬೈಲ್ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್, ಬಿಂದಿಯಾ ಶೆಟ್ಟಿ, ಅನೂಪ್ ಶೆಟ್ಟಿ, ರಾಮಚಂದ್ರ ಶೆಟ್ಟಿ ತಡಂಬೈಲ್ ನಿರೂಪಿಸಿದರು.

ಸ್ಪರ್ಧಾ ಫಲಿತಾಂಶ

ವಾಲಿಬಾಲ್ ಪಂದ್ಯಾಟದಲ್ಲಿ ಪಂಜ ಫ್ರೆಂಡ್ಸ್ ಪ್ರಥಮ, ಸುರತ್ಕಲ್ ಸ್ಟ್ರೈಕರ್ಸ್ ದ್ವಿತೀಯ, ಐಎಎಂ ಟೈಗರ್ ತೃತೀಯ ಹಾಗೂ ಎಂಸಿಎಫ್ ಮುಂಚೂರು ಚತುರ್ಥ ಸ್ಥಾನ ಗಳಿಸಿತು. ಮಹಿಳಾ ವಿಭಾಗದಲ್ಲಿ ಉಜಿರೆ ಪ್ರಥಮ ಮತ್ತು ಉಡುಪಿ ದ್ವಿತೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net