

ಮಂಗಳೂರು : ಬ್ಯಾಪ್ಟಿಸ್ಟ್ ಸ್ಪೋರ್ಟ್ಸ್ ೌಂಡೇಶನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಕನ್ನಡ ಮಾಧ್ಯಮಗಳ ಬಾಲಕ ಮತ್ತು ಬಾಲಕಿಯರ ವಿಭಾಗದ ‘ರಾಜ್ಯೋತ್ಸವ ಕಪ್-2024’ವಾಲಿಬಾಲ್ ಪಂದ್ಯಾಟ ಅ.26ರಂದು ಬೆಳಗ್ಗೆ 9.30ರಿಂದ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.
ರಾಷ್ಟ್ರಮಟ್ಟದ ವಾಲಿಬಾಲ್ ಅಟಗಾರ ಸುನಿಲ್ ಬಾಳಿಗಾ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಸಾಯಂಕಾಲ 4ಕ್ಕೆ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯ್ಸ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ರಾಷ್ಟ್ರಮಟ್ಟದ ವಾಲಿಬಾಲ್ ಅಟಗಾರ
ಎವರೆಸ್ಟ್ ಪಿಂಟೊ ಬಹುಮಾನ ವಿತರಿಸಲಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಅರುಣ್ ಬ್ಯಾಪ್ಟಿಸ್ಟ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೌರವಾಧ್ಯಕ್ಷ ಸತೀಶ್ ಎಸ್., ಟ್ರಸ್ಟಿ ಗಣೇಶ್ ಕುಡ್ವ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ, ್ರಾನ್ಸಿಸ್ ಸಲ್ಡಾನಾ, ಸುನಿಲ್ ಅಂಚನ್, ಉದಯ್ ಅಚಾರ್ ಉಪಸ್ಥಿತರಿದ್ದರು.