

ಶಿವಮೊಗ್ಗ: ಕ್ರಿಕೆಟ್, ಫುಟ್ಬಾಲ್ ಅಬ್ಬರದ ನಡುವೆಯೂ ಇತರ ಕ್ರೀಡೆಗಳ ಜನಪ್ರಿಯತೆ ಕುಗ್ಗಿಲ್ಲ. ಆ ಸಾಲಿನಲ್ಲಿ ವಾಲಿಬಾಲ್ ಕೂಡ ಇದೆ. ವಾಲಿಬಾಲ್ ಪಟುಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕಿದೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನೆಹರು ಕ್ರೀಡಾಂಗಣದಲ್ಲಿ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಜಿಲ್ಲಾ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ಶನಿವಾರ ಯುನೈಟೆಡ್ ಕಪ್-2023 ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕರ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ವಾಲಿಬಾಲ್ ಕ್ಲಬ್‌ನ ಕ್ರೀಡಾಪಟು ಸರ್ದಾರ್ ಜಾಫರ್ ಎಲ್ಲ ಪಟುಗಳಿಗೂ ಮಾದರಿ ಎಂದು ಶ್ಲಾಘಿಸಿದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಇತರ ಕ್ರೀಡೆಗಳ ಜತೆಗೆ ವಾಲಿಬಾಲ್‌ಗೂಗೆ ಶಕ್ತಿ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಹೇಳಿದರು.
ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, 2ನೇ ವರ್ಷದ ವಾಲಿಬಾಲ್ ಪಂದ್ಯಾವಳಿ ಇದಾಗಿದ್ದು ವಾಲಿಬಾಲ್ ಸಂಸ್ಥೆಯು ನಿರಂತರ ಚಟುವಟಿಕೆ ಮೂಲಕ ಮತ್ತಷ್ಟು ಪಂದ್ಯಾವಳಿಗಳನ್ನು ಆಯೋಜಿಸುವಂತಾಗಲಿ ಎಂದರು.
ವಾಲಿಬಾಲ್ ಸಂಸ್ಥೆ ಜಿಲ್ಲಾಧ್ಯಕ್ಷ ಕೆ.ಎಸ್.ಶಶಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಪುಟ್ಬಾಲ್ ಸಂಸ್ಥೆ ಜಿಲ್ಲಾಧ್ಯಕ್ಷ ಶ್ರೀನಾಥ್, ಜಿ.ಎನ್.ಮೇಘರಾಜ್, ಶಿಕಾರಿಪುರದ ರಾಮಣ್ಣ, ಡಿ.ಎಸ್.ಅಬ್ದುಲ್ ರೆಹಮಾನ್, ಪ್ರತಿಭಾ ಜಾಫರ್ ಉಪಸ್ಥಿತರಿದ್ದರು.