

ಸಾಗರ: ಫೈನಲ್ ಪಂದ್ಯದಲ್ಲಿ ಜೋಗ್-ಕಾರ್ಗಲ್ ಕೆಪಿಸಿ ಆಂಗ್ಲ ಮಾಧ್ಯಮ ಶಾಲಾ ತಂಡವನ್ನು ಮಣಿಸಿದ ಮಾಲ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕಿಯರ ತಂಡ ತಾಲೂಕಿನ ಯಡಜಿಗಳೆಮನೆಯಲ್ಲಿ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲೂಕು ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಮೂಲಕ ಜಿಲ್ಲಾ ಮಟ್ಟದ ಟೂರ್ನಿಗೆ ಅರ್ಹತೆ ಗಿಟ್ಟಿಸಿತು.
ಮಾಲತೇಶ್, ಸತ್ಯನಾರಾಯಣ ಶಿರವಂತೆ, ಎಂ.ಪಿ.ಸತ್ಯನಾರಾಯಣ್, ನಾಗರಾಜ್, ಜಾವೀದ್, ಅಮೃತಾ ಬಹುಮಾನ ವಿತರಿಸಿದರು.