ಒಕ್ಕಲಿಗರು ಉದ್ಯೋಗ ನೀಡುವ ಪ್ರಭುಗಳಾಗಿ: ಆದಿಚುಂಚನಗಿರಿ ಶ್ರೀಗಳು ಕರೆ

nirmal
Published on

ಬೆಂಗಳೂರು: ಒಕ್ಕಲಿಗ ಸಮುದಾಯ ಅನ್ನ ನೀಡುವುದಕ್ಕೆ ಹೆಸರುವಾಸಿ.ಕೇವಲ ಕೃಷಿಗೆ ಸೀಮಿತವಾಗದೆ ನೂರಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆಗಳನ್ನು ಸ್ಥಾಪಿಸುವ ಪ್ರಭುಗಳಾಗಿ ಬೆಳೆಯುವಂತಾಗಬೇಕು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕರೆ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಉದ್ದಿಮೆದಾರರನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಫಸ್ಟ್​ ಸರ್ಕಲ್​ ಸೊಸೈಟಿ ಆಯೋಜಿಸಿರುವ ಮೂರು ದಿನಗಳ "ಉದ್ಯಮಿ ಒಕ್ಕಲಿಗ' ಸಮಾವೇಶಕ್ಕೆ ಶುಕ್ರವಾರ ಶ್ರೀಗಳು ಚಾಲನೆ ನೀಡಿ ಮಾತನಾಡಿದರು.

ಸಮುದಾಯದ ಉದ್ಯಮದಾರರು ಒಟ್ಟಿಗೆ ಸೇರಿರುವುದು ಗಮನಾರ್ಹ. ಬದಲಾದ ಕಾಲಟ್ಟದಲ್ಲಿ ವ್ಯವಸಾಯದ ಜತೆಗೆ ತಂತ್ರಜ್ಞಾನ ಬಳಸಿಕೊಂಡು ಉದ್ದಿಮೆ ಸ್ಥಾಪಿಸುವಂತಾಗಬೇಕು. ಈ ಮೂಲಕ ಅನ್ನದಾತರಾದ ನಮ್ಮ ಜನಾಂಗ ಉದ್ಯೋಗದಾತವಾಗಬೇಕು. ಮುಂದಿನ ತಲೆಮಾರಿಗೆ ಇದು ಅನುಕೂಲವಾಗಬೇಕು. 3 ವರ್ಷದಲ್ಲಿ ಈ ಸಂಸ್ಥೆ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದೆ ಎಂದು ಶ್ರೀಗಳು ಶ್ಲಾಘಿಸಿದರು.

ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಅವರು ನಮ್ಮ ಸಮಾಜವನ್ನು ಎತ್ತರಕ್ಕೆ ಬೆಳೆಸಿದ್ದವರು. ಅದೇದಾರಿಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಮುನ್ನಡೆಯುತ್ತಿದ್ದಾರೆ. ನಮ್ಮ ಸಮಾಜದ ಕೆಲವರು ಬೇರೆ ಕ್ಷೇತ್ರಗಳನ್ನು ಅಗಾಧ ಸಾಧನೆಗೈದಿದ್ದಾರೆ. ಫಸ್ಟ್​ ಸರ್ಕಲ್​ ರೂಪಿಸುವ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇರಲಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಜನಾಂಗದ ಯುವಕರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರ ಸಲಹೆ ಪಡೆದು ಉದ್ದಿಮೆಗಳನ್ನು ಸ್ಥಾಪಿಸುವ ಕೆಲಸವಾಗಬೇಕು. ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸುವ ಕೆಲಸವನ್ನು ಮಾಡಿಕೊಳ್ಳುವುದಕ್ಕೆ ನಾನು ಸಿದ್ಧ ಇದ್ದೇನೆ ಎಂದರು. ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಸಭಾಪತಿ ಬಿ.ಎಲ್​. ಶಂಕರ್​, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ಸೇರಿ ನೂರಾರರು ಉದ್ದಿಮೆದಾರರು ಉಪಸ್ಥಿತರಿದ್ದರು.

ಉತ್ಪನ್ನಗಳ ಪ್ರದರ್ಶನ

ಸಮಾವೇಶದಲ್ಲಿ 100ಕ್ಕೂ ಅಧಿಕ ಸಮುದಾಯದ ಉದ್ಯಮದಾರರು ಮಳಿಗೆಗಳನ್ನು ಸ್ಥಾಪಿಸಿ ಪ್ರಾತ್ಯಕೆಗಳ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಒಕ್ಕಲಿಗರ ಆಹಾರ ಪದ್ಧತಿ,ಸಂಸತಿ ಪರಿಚಯಿಸಲಾಯಿತು. ಚೆನ್ನೆ, ಕೊಯಮತ್ತೂರು, ಕೃಷ್ಣಗಿರಿ, ಹೊಸೂರು, ಥೇಣಿ ಮತ್ತು ಕಂಬಂ ಉದ್ದಿಮೆದಾರರಿದ್ದರು. ಮುಂದಿನ ಎರಡು ದಿನ ಕೃಷಿ, ಆರೋಗ್ಯ, ಶಿಕ್ಷಣ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಗಳು, ಮನರಂಜನೆ, ನವೋದ್ಯಮ, ಆಹಾರ, ಆತಿಥ್ಯ ಸೇರಿ ಎಲ್ಲ ಕ್ಷೇತ್ರಗಳ ಬಗ್ಗೆ ತಜ್ಞರು ವಿಸತ ಚರ್ಚೆ ನಡೆಯಲಿದೆ. ಗಂಗವಾಡಿ ರಾಜವಂಶದ ಲಾಂಛನ ಸಮಾವೇಶದ ಆಕರ್ಷಣೆ ಕೇಂದ್ರವಾಗಿದೆ.

ಒಕ್ಕಲಿಗ ಅಂದರೆ ನಾಯಕತ್ವ, ಸ್ವಾಭಿಮಾನಕ್ಕೆ ಹೆಸರುವಾಸಿ. ನಮ್ಮ ಜನಾಂಗಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು. ರಾಜಕೀಯ ಕ್ಷೇತ್ರದಲ್ಲಿ ಬಲಾಢ್ಯವಾಗಿ ಬೆಳೆದಿದ್ದೇವೆ. ಜನಸಂಖ್ಯೆ ಅನುಗುಣವಾಗಿ ಉದ್ಯಮ ಕ್ಷೇತ್ರದಲ್ಲಿಯೂ ನಮ್ಮ ಜನಾಂಗ ಬೆಳೆಯುವಂತಾಗಬೇಕು. ತಂತ್ರಾನ ಸದ್ಬಳಕೆ ಮಾಡಿಕೊಳ್ಳಬೇಕು. ಈಗಿನ ಕಾಲಕ್ಕೆ ತಕ್ಕಂತೆ ಉದ್ಯಮಶೀಲತೆ ಬೆಳೆಯಬೇಕು.ಇಂತಹ ಕಾರ್ಯಕ್ರಮಗಳು ನಮಗೆ ಹೆಚ್ಚಿನ ಪ್ರೇರಣೆ ನೀಡುವಂತಾಗಬೇಕು.

| ಅಶ್ವತ್ಥನಾರಾಯಣ. ಶಾಸಕ.

ಶಿಕ್ಷಣ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜ ಮುಂದಿದೆ. ದೊಡ್ಡ ದೊಡ್ಡ ಗುತ್ತಿಗೆದಾರರಿದ್ದಾರೆ. ಮುಂದಿನ ಐದು ವರ್ಷದಲ್ಲಿ ಉದ್ದಿಮೆ ಕ್ಷೇತ್ರದಲ್ಲಿ ನಮ್ಮ ಜನಾಂಗ ಎತ್ತರಕ್ಕೆ ಬೆಳೆಯುವಂತಾಗಬೇಕು.ಸಮುದಾಯದ ಯುವ ಉದ್ದಿಮೆದಾರರರನ್ನು ಪ್ರೋತ್ಸಾಹಿಸಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ. ಇಂತಹ ಕಾರ್ಯಕ್ರಮಗಳು ಯುವಪೀಳಿಗೆಗೆ ಒಳ್ಳೆಯ ಸಂದೇಶ ನೀಡುವಂತಾಗಲಿ.

| ಗೋಪಾಲಯ್ಯ, ಶಾಸಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net