ಗಣತಿಯಲ್ಲಿ ಒಕ್ಕಲಿಗರು ಉಪಜಾತಿ ದಾಖಲಿಸಿ

Published on

ಕುಣಿಗಲ್​: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಸಾಮಾಜಿಕ, ಶೆಣಿಕ, ಆರ್ಥಿಕ ಸಮೀೆ ಮತ್ತು ಜಾತಿ ಗಣತಿಯಲ್ಲಿ ಒಕ್ಕಲಿಗ ಸಮುದಾಯದವರು ಕಡ್ಡಾಯವಾಗಿ ತಮ್ಮ ಉಪಜಾತಿಗಳನ್ನು ದಾಖಲಿಸಬೇಕೆಂದು ತಾಲೂಕಿನ ಕಾಡುಮತ್ತಿಕೆರೆ ಅರೇಶಂಕರ ಮಠದ ಮಠಾಧ್ಯ ಶ್ರೀ ಸಿದ್ದರಾಮಚೆತನ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯದವರು ಸರ್ಕಾರದ ಸೌಭ್ಯಗಳು ಮತ್ತು ಮೀಸಲಾತಿಗಾಗಿ ಉಪ ಜಾತಿ ಸಹಿತವಾಗಿ ಗುರುತಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೆ.22ರಿಂದ ನಡೆಸುವ ಸಮೀೆಯು ತುಂಬಾ ಮಹತ್ತರವಾಗಿದ್ದು, ಪ್ರತಿಯೊಬ್ಬ ಒಕ್ಕಲಿಗರು ತಮ್ಮ ಉಪಜಾತಿ ಸಮೇತ ಸರ್ಕಾರವೇ ಗುರುತಿಸಿರುವಂತೆ ಗಂಗಡ್​ ಕಾರ್​ ಒಕ್ಕಲಿಗ, ಮರಸು ಒಕ್ಕಲಿಗ, ದಾಸ ಒಕ್ಕಲಿಗ ಎಂದು ಉಪ ಜಾತಿಗಳನ್ನು ಕಡ್ಡಾಯವಾಗಿ ಬರೆಸಬೇಕೆಂದು ಅವರು ತಿಳಿಸಿದರು.

ಒಕ್ಕಲಿಗ 3/ಎ ಕ್ಯಾಟಗರಿಯಲ್ಲಿ ಈಗಾಗಲೇ ಶೇ.4 ಮೀಸಲಾತಿ ಬರುತ್ತಿದ್ದು, ಗಂಗಡ್​ ಕಾರ್​ ಒಕ್ಕಲಿಗ, ಮರಸು ಒಕ್ಕಲಿಗ, ದಾಸ ಒಕ್ಕಲಿಗರು ಸೇರಿದಂತೆ, ಸರ್ಪ ಒಕ್ಕಲಿಗ, ಹಳ್ಳಿಕಾರ್​ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ನಾಮಧಾರಿ ಒಕ್ಕಲಿಗ ಕೇಂದ್ರ ಸರ್ಕಾರದ (ಆರ್ಥಿಕವಾಗಿ ದುರ್ಬಲ ವಿಭಾಗ) ಶೇ.10ರಷ್ಟು ಮೀಸಲಾತಿಯಲ್ಲಿ ಬರುತ್ತಿದೆ. ನಮ್ಮಲ್ಲಿ ಉಪಜಾತಿ ಸಹಿತ ಜಾತಿ ಪ್ರಮಾಣ ಪತ್ರವಿರದೆ ಈ ಮೀಸಲಾತಿಯನ್ನು ಕಳೆದ 10 ವರ್ಷಗಳಿಂದ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನಮ್ಮ ಸಮುದಾಯುದ ವಿದ್ಯಾರ್ಥಿಗಳಿಗೆ ಉನ್ನತ ಶಿಣದಲ್ಲಿ, ವಿದ್ಯಾವಂತರಿಗೆ ಉದ್ಯೋಗದಲ್ಲಿ ಹಿನ್ನಡೆಯಾಗುತ್ತಿದೆ. ಹಾಗಾಗಿ ಒಕ್ಕಲಿಗರು ತಮ್ಮ ಉಪಜಾತಿ ಸಹಿತ ಈ ಸಮೀೆಯಲ್ಲಿ ಗುರುತಿಸಿಕೊಳ್ಳಬೇಕೆಂದು ತಿಳಿಸಿದರು.

ಗ್ರಾಪಂ ಸದಸ್ಯ ಬಾ.ನ.ರವಿ ಮಾತನಾಡಿ, ಸಮೀೆ ಕಾರ್ಯಕ್ಕೆ ಇನ್ನು ಕೇವಲ ಹತ್ತು ದಿನಗಳಿದ್ದು, ಈ ಕೂಡಲೇ ಸಮುದಾಯದ ಗಣ್ಯ ವ್ಯಕ್ತಿಗಳು ಒಗ್ಗೂಡಿ ಪೇತಿತವಾಗಿ ಈ ಒಂದು ಸಮೀೆ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಜತೆಗೆ ಸಮುದಾಯದ ಜನರಲ್ಲಿ ಅರಿವು ಮೂಡಿಸಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net