ರಾಜ್ಯಸರ್ಕಾರ ಎಫ್ಐಆರ್ ಹಿಂಪಡೆಯಲಿ: ಒಕ್ಕಲಿಗರ ಸೇವಾ ಟ್ರಸ್ಟ್ ಅಧ್ಯಕ್ಷ ತಮ್ಮಯ್ಯ ಆಗ್ರಹ

Vokkaligara Service Trust press conference Mandya
Published on

ಮಂಡ್ಯ: ವಿಶ್ವ ಮಾನವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಅವರ ಮೇಲೆ ಹಾಕಿರುವ ಎಫ್‌ಐಆರ್ ಅನ್ನು ರಾಜ್ಯಸರ್ಕಾರ ಹಿಂಪಡೆಯಬೇಕು ಎಂದು ಒಕ್ಕಲಿಗ ಸೇವಾ ಟ್ರಸ್ಟ್‌ನ ಅಧ್ಯಕ್ಷ ತಮ್ಮಯ್ಯ ಮನವಿ ಮಾಡಿದರು.

ಸ್ವಾಮೀಜಿ ಅವರಿಗೆ ವಯಸ್ಸಾಗಿದ್ದು, ಬಾಯ್ತಪ್ಪಿನಿಂದ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಯಿಂದ ತಪ್ಪಾಗಿದೆಯೆಂದು ಈಗಾಗಲೇ ಕ್ಷಮೆಯನ್ನೂ ಕೇಳಿದ್ದಾರೆ. ಅದನ್ನು ಪರಿಗಣಿಸಿ, ಸರ್ಕಾರ ಎಫ್‌ಐಆರ್‌ನ್ನು ಹಿಂಪಡೆಯಬೇಕೆಂದು. ಒಂದು ವೇಳೆ ಸರ್ಕಾರ ಎಫ್‌ಐಆರ್ ಹಿಂಪಡೆಯದೇ ಇದ್ದರೆ ಒಕ್ಕಲಿಗ ಸಮುದಾಯದ ಸೇರಿದಂತೆ ಎಲ್ಲ ಸಂಘ ಸಮಸ್ಥೆಗಳು ಹೋರಾಟ ಮಾಡಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ಸ್ವಾಮೀಜಿ ಮಾತನಾಡುವ ವೇಳೆ ಉದ್ವೇಗದಿಂದ ಲೋಪವಾಗಿದೆ. ಸ್ವಾಮೀಜಿ ಕ್ಷಮೆಯಾಚನೆ ಮಾಡಿದ್ದು, ಇದನ್ನು ಮುಂದುವರೆಸದೇ ಸದರಿ ಪ್ರಕರಣದಿಂದ ಸ್ವಾಮೀಜಿಯವರನ್ನು ಖುಲಾಸೆ ಮಾಡಬೇಕು ಎಂದು ಕೋರಿದರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಲ್.ಕೃಷ್ಣ, ರಾಜ್ಯ ಉಪಾಧ್ಯಕ್ಷ ಕೃಷ್ಣೇಗೌಡ, ಚಂದ್ರಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net