

ಯಳಂದೂರು: ಪಟ್ಟಣದ ನಿವಾಸಿ ಕೆಆರ್‌ಐಡಿಎಲ್‌ನ ಕಾರ್ಯನಿರ್ವಾಹಕ ಅಧಿಕಾರಿ ಚಿಕ್ಕಲಿಂಗಯ್ಯ ಅವರಿಗೆ ಮೈಸೂರಿನ ಅನ್ವೇಷಣಾ ಟ್ರಸ್ಟ್ ವತಿಯಿಂದ ನೀಡುವ ಧ್ವನಿ ಕೊಟ್ಟ ಧಣಿ ಪ್ರಶಸ್ತಿಯನ್ನು ಇತ್ತೀಚೆಗೆ ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಪ್ರದಾನ ಮಾಡಿದರು.
ಮೈಸೂರಿನ ದಿ ಇನ್‌ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್‌ನ ಸಭಾಂಗಣದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು. ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜೇ ಅರಸ್ ಅವರ ಸ್ಮರಣಾರ್ಥ ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಬಾರಿ 43 ನೇ ವರ್ಷದ ಪುಣ್ಯ ಸ್ಮರಣೆಯ ನಿಮಿತ್ತ ನೀಡಿದ ಪ್ರಶಸ್ತಿ ಪಡೆದ ಐವರ ವಿವಿಧ ಕ್ಷೇತ್ರ ಸಾಧಕರಲ್ಲಿ ಇವರೂ ಕೂಡ ಒಬ್ಬರು. ಕಳೆದ 24 ವರ್ಷಗಳಿಂದಲೂ ಚಿಕ್ಕಲಿಂಗಯ್ಯ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ.
ಅನ್ವೇಷಣಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಆರ್ಯ ಅಮರನಾಥರಾಜೇ ಅರಸ್, ಉಪಾಧ್ಯಕ್ಷ ಎಚ್.ಎಂ.ಟಿ.ಲಿಂಗರಾಜೇ ಅರಸ್, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಎಚ್.ಎಂ.ವೆಂಕಟೇಶ್, ಸಂಧ್ಯಾ ಸುರಕ್ಷಾ ಟ್ರಸ್ಟ್‌ನ ಡಾ.ಬಿಆರ್.ನಟರಾಜು ಜೋಯಿಸ್, ಕರ್ನಾಟಕ ಅರಸು ಮಹಾಮಂಡಲಿ ಟ್ರಸ್ಟ್‌ನ ಡಾ.ಎಂ.ಜಿ.ಆರ್.ಅರಸ್ ಪ್ರಶಸ್ತಿ ಪುರಸ್ಕೃತ ಎಂ. ಮಲ್ಲರಾಜೇ ಅರಸ್, ನಾರಾಯಣ, ಎಸ್. ಉದಯಶಂಕರ್, ಎಂ.ಆರ್.ಆನಂದ್‌ಕುಮಾರ್, ಟಿ. ತ್ಯಾಗರಾಜ್ ಇತರರು ಇದ್ದರು.