ವಿಎಲ್​ಎಸ್​ಐ ವಿನ್ಯಾಸ ತರಬೇತಿ ಕಾರ್ಯಕ್ರಮ

VLSI design
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಎಲ್​ಎಸ್​ಐ ವಿನ್ಯಾಸ ಕುರಿತು ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ವಿವಿ ಡೀನ್ (ಆಕಾಡೆಮಿಕ್ಸ್) ಡಾ. ಪ್ರಕಾಶ ತೇವರಿ ಹಾಗೂ ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಉದ್ಘಾಟಿಸಿದರು. ಡಾ. ಸುಜಾತಾ ಕೋಟಬಾಗಿ, ಡಾ. ಸುನಿತಾ ಬೂದಿಹಾಳ, ಡಾ. ಸರೋಜಾ ಸಿದ್ದಮಲ್ ಇದ್ದರು.

ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬೆಳಗಾವಿ, ಲಕ್ಷೆ್ಮೕಶ್ವರದಿಂದ ವಿವಿಧ ಇಂಜಿನಿಯರಿಂಗ್ ಕಾಲೇಜ್​ಗಳ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಪರಿಕಲ್ಪನೆ ಹಂತದಿಂದ ತಯಾರಿಕೆ ಹಂತದವರೆಗೆ ವಿಎಲ್​ಎಸ್​ಐ ವಿನ್ಯಾಸ ಕುರಿತು ತರಬೇತಿ ನೀಡಲಾಗುತ್ತದೆ. ವಿಎಲ್​ಎಸ್​ಐ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ ಮತ್ತು ಜ್ಞಾನವನ್ನು ನೀಡಲು ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಕೆಎಲ್​ಇ ತಾಂತ್ರಿಕ ವಿವಿ ತಿಳಿಸಿದೆ.

ಸಿಫೈವ್ ಮಾಜಿ ಉಪಾಧ್ಯಕ್ಷ ಡಾ. ಅನಂದ ಬರಿಯಾ ಮಾತನಾಡಿ ವಿಎಲ್​ಎಸ್​ಐ ವಿನ್ಯಾಸದಲ್ಲಿ ಪರಿಣತಿ ಹೊಂದವರಿಗೆ ಸೆಮಿಕಂಡಕ್ಟರ್ ಕೈಗಾರಿಕೆಗಳಲ್ಲಿ ಉತ್ತಮ ಅವಕಾಶಗಳಿವೆ ಎಂದು ಹೇಳಿದರು. ತರಬೇತಿ ಕಾರ್ಯಕ್ರಮದಲ್ಲಿ ರಾಂಬಸ್ ಚಿಪ್ ಟೆಕ್ನಾಲಾಜೀಸ್​ನ ಡಾ. ನಿತೀನ, ಗ್ಲೋಬಲ್ ಫೌಂಡ್ರೀಸ್​ನ ಡಾ. ಜಗದೀಶನ್ ವಿ., ಬೆಂಗಳೂರಿನ ಅಲ್ಪಾವೇವ್​ಸ ಐಪಿ ಕಂಪನಿಯ ಡಿಎಫ್​ಟಿ ಇಂಜಿನಿಯರ್ ರಾಕೇಶ ಸಿಂಗನಹಳ್ಳಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net