ವೆಂಕಟಾಪುರ ಗ್ರಾಮದ  ಸ್ಮಶಾನ ಅಭಿವೃದ್ಧಿಗೆ ಕಾಯಕಲ್ಪ!

20241113_110558.jpg
Published on

- ಅಂದಾಜು 40ಲಕ್ಷ ರೂ. ವೆಚ್ಚದ ಯೋಜನೆ ಸಿದ್ದಗೊಳ್ಳುತ್ತಿದೆ

ಬೆಳಗಾವಿ; ಹಲವು ದಶಕಗಳಿಂದ ಅಭಿವೃದ್ಧಿ, ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿರುವ ವೆಂಕಟಾಪುರ ಗ್ರಾಮದ ಸ್ಮಶಾನ ಅಭಿವೃದ್ಧಿ ಗೆ ಕೊನೆಗೂ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯತಿ ಮುಂದಾಗಿದೆ! ಅಲ್ಲದೆ, ಮಂಗಳವಾರ ಗ್ರಾಮದ ರುದ್ರಭೂಮಿ ಗೆ ಮೂಡಲಗಿ ತಾಲೂಕು ಪಂಚಾಯತಿ ಅಧಿಕಾರಿಗಳ ತಂಡ ಭೇಟಿ‌ ನೀಡಿ ಪರಿಶೀಲನೆ ನಡೆಸಿ ಹೋಗಿದೆ.

ಮೂಡಲಗಿ ತಾಲೂಕಿನ ಅವರಾದಿ ಗ್ರಾಪಂ ವ್ಯಾಪ್ತಿಯ ವೆಂಕಟಾಪುರ ಗ್ರಾಮದಲ್ಲಿ ಅಂದಾಜು 2,800 ಜನಸಂಖ್ಯೆಗೆ ಹೊಂದಿದ್ದು, ಅಂತ್ಯಸಂಸ್ಕಾರ ಕ್ಕಾಗಿ ಒಂದೇ ರುದ್ರಭೂಮಿಯಿದೆ. ಅದು ಒತ್ತುವರಿ, ಅಭಿವೃದ್ಧಿ ಇಲ್ಲದೆ ಹಾಳಾಗಿದೆ. ಇದೀಗ ಜಿಲ್ಲಾ ಪಂಚಾಯತಿ ಸಿಇಒ ರಾಹುಲ ಶಿಂಧೆ ಅವರು ಆಸಕ್ತಿ ವಹಿಸಿ ಸುಮಾರು 2 ಎಕರೆ ಪ್ರದೇಶ ರುದ್ರಭೂಮಿಯಲ್ಲಿ ವೈಜ್ಣಾನಿಕ ಮಾದರಿಯಲ್ಲಿ ದೇಹ ದಹನ ವ್ಯವಸ್ಥೆ, ದೇಹ ದಹನ ಹಾಗೂ ನಂತರದ ವಿಧಿ, ವಿಧಾನ ಪೂರೈಸಲು ಅಗತ್ಯ ನೀರಿನ ಸೌಲಭ್ಯ, ಸ್ನಾನ ಗೃಹ, ವಿದ್ಯುತ್ ದೀಪದ ವ್ಯವಸ್ಥೆ. ಬಂದವರು ಕುಳಿತುಕೊಳ್ಳಲು ಆಸನ ವ್ಯವಸ್ಥೆ. ಒಟ್ಟಾರೆ ಕಾಲಿಡಲು ಭಯಪಡುವಂತಹ ಪಾಳುಬಿದ್ದ ಪ್ರದೇಶವನ್ನು ರುದ್ರಭೂಮಿ ಅಭಿವೃದ್ಧಿ ‌ಪಡಿಸಲು ನರೇಗಾ ಯೋಜನೆಯ ಹತ್ತು ಲಕ್ಷ ರೂ. ಸೇರಿ ವಿವಿಧ ಯೋಜನೆಗಳ ಅಡಿಯಲ್ಲಿ ಸುಮಾರು 40ಲಕ್ಷ ರೂ. ವೆಚ್ಚದ ಯೋಜನೆ ಸಿದ್ದಗೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net