ಬಿಜೆಪಿಯಿಂದ ಮಾತ್ರ ದಲಿತರಿಗೆ ನ್ಯಾಯ, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೇಳಿಕೆ

IMG_20240723_105834
Published on

ಕೊಪ್ಪಳ: ಬಿಜೆಪಿ ಕೋಮುವಾದಿ ಪಕ್ಷ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ, ಬಿಜೆಪಿ ಎಸ್ಸಿ, ಎಸ್ಟಿ ನಾಯಕರಿಗೆ ಅನೇಕರಿಗೆ ಅವಕಾಶ ನೀಡಿದೆ. ಈಗ ಪಜಾಯ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ‌ ನೇಮಿಸಿದೆ ಎಂದು ಬಿಜೆಪಿ‌ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಛಲವಾದಿ ನಾರಾಯಣಸ್ವಾಮಿ, ಎ.ನಾರಾಯಣಸ್ವಾಮಿ, ಬಸವರಾಜ ದಢೇಸುಗೂರು ಸೇರಿ ಅನೇಕರಿಗೆ ಶಾಸಕ,‌‌ ಸಚಿವ, ಡಿಸಿಎಂ ಸ್ಥಾನ ನೀಡಿದೆ. ಪರಿಶಿಷ್ಟರಿಗೆ ಅನೇಕ ಯೋಜನೆ ನೀಡಿದ್ದಾರೆ. ಪಕ್ಷದಲ್ಲೂ ಮಹತ್ವದ ಹುದ್ದೆ ನೀಡಿದೆ. ಬೂತ್ ನಿಂದ‌ ರಾಜ್ಯ, ರಾಷ್ಟ್ರಮಟ್ಟದವರೆಗೆ ಆದ್ಯತೆ ನೀಡಿದೆ ಎಂದರು.

ಅಂಬೇಡ್ಕರ್ ಅವರು ಶೋಷಿತ ವರ್ಗಕ್ಕೆ ಅವಕಾಶ ನೀಡಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡುವ ಪಕ್ಷ ಆಡಳಿತದಲ್ಲಿರಬೇಕೆಂದು ಬಯಸಿದ್ದರು. ಅವರ ಆಶಯಕ್ಕೆ ತಕ್ಕಂತೆ ಬಿಜೆಪಿ ನಡೆದುಕೊಳ್ಳುತ್ತಿದೆ. ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆ‌ಮಾಡುವ ಮೂಲಕ ಪಜಾಗೆ ಆದ್ಯತೆ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಸಮುದಾಯ ಜಾಗೃತಿ ಮಾಡುತ್ತಿದ್ದಾರೆ. ನಾವೆಲ್ಲ ಅವರ ಬೆಂಬಲಕ್ಕೆ ನಿಲ್ಲಲಿದ್ದೇವೆಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಪಜಾ ವರ್ಗದ ನಾಯಕರಿಗೆ ಅಬಕಾರಿ ಖಾತೆ ನೀಡಿದ್ದಾರೆ. ಎಸ್ಟಿ ನಿಗಮದ ಮೂಲಕ ಕೋಟ್ಯಂತರ ರೂ. ಹಣ ಕೊಳ್ಳೆ ಹೊಡೆದಿದ್ದಾರೆ‌. ಕೊಲೆ, ಸುಲಿಗೆ ನಡೆಯುತ್ತಿದೆ. ಪಜಾ, ಪಪಂ, ಮಹಿಳೆಯರಿಗೆ ರಕ್ಷಣೆ ಇಲ್ಲ. ಯಾರ ಹಿತಕ್ಕಾಗಿ ಆಡಳಿತ ನಡೆಸುತ್ತಿದ್ದಾರೆಂದು ಗೊತ್ತಾಗುತ್ತಿಲ್ಲವೆಂದು ಪ್ರಶ್ನಿಸಿದರು.

ಪ್ರಮುಖರಾದ ಕನಕಪ್ಪ ಛಲವಾದಿ, ಸುಂಕಪ್ಪ ಮಾಲಗಿತ್ತಿ, ಕಯಣಿಕೇರಾ ಗ್ರಾಪಂ ಸದಸ್ಯ ಲಿಂಗರಾಜ ಕಟ್ಟಿಮನಿ, ಲಕ್ಷ್ಮ‌ಣ ಪೂಜಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net