

ವಿಜಯಪುರ: ತಜ್ಞ ವೈದ್ಯರ ಸಲಹೆ ಇಲ್ಲದೇ ಎಂಟಿಪಿ (ಮೆಡಿಕಲ್ ಟರ್ಮಿನೆಷನ್ ಆ್ ಪ್ರೆಗ್ನೆನ್ಸಿ) ಗೆ ಸಂಬಂಧಪಟ್ಟ ಔಷಧಗಳನ್ನು ಮಾರಾಟ ಮಾಡದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ, ಕೆಲವು ಔಷಧ ಮಳಿಗೆಗಳು ನಿಯಮ ಉಲ್ಲಂಘಿಸಿ ಔಷಧ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅಂತಹ ಮಾರಾಟಗಾರರ ವಿರುದ್ಧ ಕಾನೂನಿನ ರಿತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಎಚ್ಚರಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಟಿಸಿ ಪಿಎನ್‌ಡಿಪಿ ಜಿಲ್ಲಾ ಸಲಹಾ ಸಮಿತಿ ಹಾಗೂ ತಪಾಸಣಾ ಮತ್ತು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.
ಎಂಟಿಪಿ (ಗರ್ಭಪಾತ) ಕೈಗೊಳ್ಳುವ ಕುರಿತಂತೆ ಕಾನೂನಿನ ಅಡಿಯಲ್ಲಿ ಅವಕಾಶವಿರುವುದರಿಂದ ಸಾರ್ವಜನಿಕರು ಭಯ ಪಡುವ ಅವಶ್ಯಕತೆ ಇಲ್ಲ. ಆದರೂ ಗರ್ಭಪಾತಕ್ಕೆ ಇಚ್ಛಿತ ಮಹಿಳೆಯರು ತಜ್ಞ ವೈದ್ಯರ ಸಲಹಾ ಚೀಟಿಗಾಗಿ ಸಂಪರ್ಕಿಸಬಹುದೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಿಲ್ಲೆಯಲ್ಲಿ ತಜ್ಞ ವೈದ್ಯರ ಸಲಹೆ ಇಲ್ಲದೆ ವಿವಿಧ ಔಷಧ ಅಂಗಡಿಗಳ ಮೂಲಕ ಗರ್ಭಪಾತಕ್ಕೆ ಸಂಬಂಧಪಟ್ಟ ಔಷಧಗಳನ್ನು ಕೌಂಟರ್‌ಸೇಲ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇನ್ನು ಮುಂದೆ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟ ಮಾರಾಟಗಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಜ್ಞವೈದ್ಯರ ಸಲಹಾ ಚೀಟಿ ಆಧಾರದ ಮೇಲೆ ಗರ್ಭಪಾತಕ್ಕೆ ಸಂಬಂಧಿಸಿದ ಔಷಧ ಮಾರಾಟಕ್ಕಾಗಿ ಆಯಾ ಔಷಧ ಮಳಿಗೆ ಮಾಲೀಕರು ಕಡ್ಡಾಯವಾಗಿ ವೈದ್ಯರ ಹೆಸರಿನೊಂದಿಗೆ ಪ್ರತ್ಯೇಕ ರಜಿಸ್ಟರ್ ನಿರ್ವಹಣೆ ಮಾಡಬೇಕು. ಅದರಂತೆ ಸ್ಟಾಕ್ (ಸಂಗ್ರಹಣಾ) ರಜಿಸ್ಟರ್‌ದಲ್ಲಿ ಓಪನಿಂಗ್ ಹಾಗೂ ಕ್ಲೋಸಿಂಗ್ ಬ್ಯಾಲೆನ್ಸ್ ಅನ್ನು ಸಹ ತಪ್ಪದೇ ನಮೂದಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯ ವಿವಿಧ ನರ್ಸಿಂಗ್‌ಹೋಮ್ ಮೂಲಕ ಎಂಟಿಪಿ ಮಾಡಿಕೊಳ್ಳುವ ಮಹಿಳೆಯರ ಕುರಿತು ಸಮಗ್ರ ಮಾಹಿತಿಯನ್ನು ಕೂಡಾ ಸಕ್ಷಮ ಪ್ರಾಧಿಕಾರದ ಉಪಾಧ್ಯಕ್ಷರು ಆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ (ಎ್ಡಬ್ಲೂಓ) ಇವರಿಗೆ ಕಡ್ಡಾಯವಾಗಿ ಸಲ್ಲಿಸುವಂತೆ ಕೂಡಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾನೂನಿನ ಉಲ್ಲಂಘನೆಗೆ ಸಂಬಂಧಿಸಿದ ಒಂದು ಆಸ್ಪತ್ರೆಗೆ ಲೈಸನ್ಸ್ ರದ್ದತಿ ಬಗ್ಗೆ ಕಾರಣ ಕೇಳಿ ನೋಟಿಸ್ ಸಹ ಜಾರಿಗೊಳಿಸಲು ಸೂಚಿಸಿದರು.
ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾನೂನಿನ ಕುರಿತಂತೆ ಗಡಿ ಭಾಗದ ವೈದ್ಯರನ್ನು ಸೇರಿದಂತೆ ಸಂಬಂಧಪಟ್ಟವರಿಗೆ ಇದೇ ೆ.25 ರಂದು ಕಾರ್ಯಾಗಾರ ಆಯೋಜಿಸಲು ನಿರ್ಧರಿಸಲಾಯಿತು.
ಸ್ಕಾೃನಿಂಗ್ ಮಷಿನ್ ಬಳಕೆಗೆ ಸಂಬಂಧಿಸಿದಂತೆ ಒಂದು ಆಸ್ಪತ್ರೆಯಿಂದ ಬಂದಿರುವ ಹೊಸ ಅರ್ಜಿಯನ್ನು ಹಾಗೂ ಆಸ್ಪತ್ರೆ ವರ್ಗಾವಣೆ ಕೋರಿ ಬಂದಿರುವ ಒಂದು ಅರ್ಜಿಯನ್ನು ಪರಿಶೀಲಿಸಿ ಆಯಾ ಆಸ್ಪತ್ರೆಗಳು ಕಾನೂನಿನ ರಿತ್ಯ ಎಲ್ಲಾ ಮಾರ್ಗಸೂಚಿಗಳನ್ನು ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಸ್ಕಾೃನಿಂಗ್ ಸ್ಥಳ, ಕೊಠಡಿ, ಸಿಸಿ ಕ್ಯಾಮೆರಾ ಸೇರಿದಂತೆ ಇನ್ನಿತರ ಅವಶ್ಯಕ ಸೌಕರ್ಯಗಳಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಂಟಿ ಪರಿಶೀಲನೆ ನಡೆಸಬೇಕು. ಚೆಕ್‌ಲಿಸ್ಟ್ ದೃಢೀಕರಣ ಆಧಾರದ ಮೇಲೆ ಸ್ಕಾೃನಿಂಗ್ ಮಷಿನ್ ಬಳಕೆ ಅನುಮತಿಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪಸೆ, ಮಕ್ಕಳ ತಜ್ಞ ಎಲ್.ಎಚ್. ಬಿದರಿ ಮತ್ತಿತರರಿದ್ದರು.