

ವಿಜಯವಾಣಿ ಸುದ್ದಿಜಾಲ ಗದಗ
ಭಾರತೀಯ ಸಂಸತಿಯನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ಸ್ವಾಮೀ ವಿವೇಕಾನಂದರು. ಮಹಾನ್ ವೀರ ಸನ್ಯಾಸಿ, ತತ್ವಜ್ಞಾನಿ, ವಿವೇಕಾನಂದರು ವಿಶ್ವದ ಯುವಕರಿಗೆ ಸ್ಪೂತಿರ್ಯಾಗಿದ್ದಾರೆ ಎಂದು ಮುಕ್ಕಣ್ಣೇಶ್ವರ ಶ್ರಿಗಳು ಹೇಳಿದರು.
ನಗರದ ಕಾಶೀ ವಿಶ್ವನಾಥ ದೇವಸ್ಥಾನದಲ್ಲಿ ಸೋಮವಾರ ಏರ್ಪಡಿಸಿದ್ದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚಿಕ್ಯಾಗೋ ನಗರದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣದ ಆರಂಭದಲ್ಲಿ "ಅಮೇರಿಕಾದ ಸಹೋದರ ಸಹೋದರಿಯರೇ' ಎಂದಾಗ ಇಡೀ ಸಮ್ಮೇಳನದಲ್ಲಿ ನೆರೆದ ಜನಸ್ತೋಮ ಎರಡು ನಿಮಿಷ ಆಕಾಶದೆತ್ತರದ ಕರತಾಳವನ್ನು ಮಾಡಿದರು. ಭಾರತೀಯ ಸಂಸತಿಯ ಅರಿವನ್ನು ವಿವೇಕಾನಂದರು ಜಗತ್ತಿಗೆ ತೋರಿಸಿಕೊಟ್ಟರು. ವಿವೇಕಾನಂದರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಕಿ ಶಾರದಾ ಬಾಣದ ಮಾತನಾಡಿ, ಸನಾತನ ಹಿಂದು ಧರ್ಮ, ಸಂಸತಿಯ ಆಧ್ಯಾತ್ಮಿಕ ರಾಯಬಾರಿ, ಯುವಕರ ಧ್ವನಿ, ಯುವಕರ ಸ್ಪೂತಿರ್ಯ ಚಿಲುಮೆ ಸ್ವಾಮಿವಿವೇಕಾನಂದರು. ದೇಹಬಲ, ಮನೋಬಲ ಮತ್ತು ಆತ್ಮಬಲ ಎಂಬ ಮೂರು ತತ್ವಗಳನ್ನು ವಿವೇಕಾನಂದರು ನೀಡಿದ್ದಾರೆ. ಇವುಗಳಿಂದ ಯುವಜನತೆ ಸದೃಢ ಭಾರತದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಸ್ವಾಮಿವಿವೇಕಾನಂದರ ವೇಷಭೂಷಣದಲ್ಲಿ ಮಿಂಚಿದರು. ಮಕ್ಕಳಿಗೆ ಸಮಿತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಸಂಸ್ಥೆಯ ಅಧ್ಯ ಪ್ರೊ. ಎಂ. ಎನ್. ಕಾಮನಹಳ್ಳಿ ಮಾತನಾಡಿದರು. ಜಿ.ಜಿ. ಕುಲಕಣಿರ್, ಕಸ್ತೂರಿಬಾಯಿ ಪತ್ತಾರ, ಎಂ.ಬಿ. ಚನ್ನಪ್ಪಗೌಡ್ರ, ಸಹ ಖಜಾಂಚಿ ರಂಗಣ್ಣ ಒಡೆಯರ, ಮಾಲತೇಶ ಲಕ್ಕುಂಡಿ, ಮಹಾದೇವಿ ಗೋಗೇರಿ, ರಾಧಿಕಾ ಬಂದಮ್ಮ, ಬಿ. ಎನ್. ಯರನಾಳ, ಎಸ್. ಎಸ್. ಪಾಟೀಲ, ಕೆ.ಬಿ. ಕೊಣ್ಣೂರ, ಗರಡಿಮನಿ, ಪುಷ್ಪಾ ಬಂಡಾರಿ ಇತರರು ಇದ್ದರು.