

ಮೂಲ್ಕಿ: ಸ್ವಾಮಿ ವಿವೇಕಾನಂದರ ಜೀವನದ ಪುಟಗಳು ಯುವಪೀಳಿಗೆಗೆ ಬಹು ದೊಡ್ಡ ಮಾಗದರ್ಶಿಯಾಗಿದ್ದು ಅವರ ಬದುಕಿನ ಸಿದ್ಧಾಂತವನ್ನು ಯುವಪೀಳಿಗೆ ಅನುಸರಿಸಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ವಕೀಲ ರವೀಶ್ ಕಾಮತ್ ಹೇಳಿದರು.
ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ, ಪಡುಪಣಂಬೂರುಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಫೇಮಸ್ ಯೂತ್ ಕ್ಲಬ್ ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಫೇಮಸ್ ಯೂತ್ ಕ್ಲಬ್ ಅಧ್ಯಕ್ಷ ಭಾಸ್ಕರ್ ಅಮೀನ್ ತೋಕೂರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ಬೈಕಂಪಾಡಿ ಅಧ್ಯಕ್ಷ ಹರೀಶ್ ಬಿ.ಶೆಟ್ಟಿ, ಫೇಮಸ್ ಯೂತ್ ಕ್ಲಬ್ ಹಿರಿಯ ಮಾರ್ಗದರ್ಶಕ ಗಣೇಶ್ ಜಿ.ಬಂಗೇರ, ರೋಟರಿ ಸಮುದಾಯ ದಳದ ಅಧ್ಯಕ್ಷ ಸಂಪತ್ ಜೆ.ಶೆಟ್ಟಿ ಉಪಸ್ಥಿತರಿದ್ದರು. ಮೋಹನ್ ದಾಸ್ ಸ್ವಾಗತಿಸಿದರು. ಕಾರ್ಯದರ್ಶಿ ಹಿಮಕರ್ ಕೋಟ್ಯಾನ್ ವಂದಿಸಿದರು. ಸಂಪತ್ ಜೆ.ಶೆಟ್ಟಿ ನಿರೂಪಿಸಿದರು.