ಯುವ ಮನಸುಗಳ ಮಹಾಗುರು ವಿವೇಕಾನಂದ

viveka
Published on

ಹುಬ್ಬಳ್ಳಿ: ಭಾರತದ ಯುವ ಮನಸುಗಳ ಮಹಾಗುರು ಸ್ವಾಮಿ ವಿವೇಕಾನಂದರು. ನರರ ಸೇವೆ ಮಾಡಲು ಧರೆಗಿಳಿದು ಬಂದ ದೊಡ್ಡ ಶಕ್ತಿ ಅವರು ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.

ನಗರದ ಕಾಡಸಿದ್ದೇಶ್ವರ ಕಲಾ ಹಾಗೂ ಕೋತ್ತಂಬರಿ ವಿಜ್ಞಾನ ಕಾಲೇಜ್‌ನಲ್ಲಿ ಶನಿವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ 162 ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬದುಕಿದ 39 ವರ್ಷದಲ್ಲಿ ಸಾಕಷ್ಟು ಸಂದೇಶವನ್ನು ವಿಶ್ವಕ್ಕೆ ನೀಡಿದ ಮಹಾ ಚೇತನ. ಅವರು ವಿದ್ಯಾಭ್ಯಾಸದ ಜತೆಗೆ ವೇದ, ಉಪನಿಷತ್‌ಗಳನ್ನು ತಾರ್ಕಿಕವಾಗಿ ಅಧ್ಯಯನ ಮಾಡುತ್ತಿದ್ದರು. ಬರುಬರುತ್ತ ಅವರ ಆಧ್ಯಾತ್ಮದತ್ತ ವಾಲಿದರು ಎಂದರು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ಡಾ. ವೀರೇಶ ಬಾಳಿಕಾಯಿ, ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ ಮಾತನಾಡಿದರು.

ಪ್ರಾಚಾರ್ಯೆ ನಿರ್ಮಲಾ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮೊದಲು ಬಿವಿಬಿ ಕಾಲೇಜ್‌ನಿಂದ ಹೊಸೂರ ಬಸ್ ನಿಲ್ದಾಣದವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.

ಕನ್ನಡ ಪ್ರಾಧ್ಯಾಪಕಿ ಪ್ರೊ. ವಿಜಯಶ್ರೀ ಹಿರೇಮಠ, ಎಬಿವಿಪಿ ನಗರ ಕಾರ್ಯದರ್ಶಿ ಸಿದ್ದಾರ್ಥ ಕೋರಿ, ಜಿಲ್ಲಾ ಸಂಚಾಲಕ ವಿಜಯ ಕಲ್ಲೂರ, ದಾನೇಶ ಕಿತ್ತೂರ, ವಿಕ್ರಂ ಗುಳಂದೆ, ಸಂಜಯ ಉದ್ನೂರ, ಅನ್ಮೂಲ ಕಲಬುರಗಿ, ಶಶಾಂಕ ಪತ್ತಾರ, ಅಮೃತಾ ಕೊಳ್ಳಿ, ಜ್ಯೋತಿ ಪಾಲಕೇರ, ಅರ್ಚಿತಾ ಸಾಬೋಜಿ, ಪ್ರಜ್ಞಾ ದಲಬಂಜನ್, ರಕ್ಷಿತಾ ಚಂಡಕೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net