ವಿವೇಕಾನಂದರ ಜಯಂತಿ ಸಂಭ್ರಮಾಚರಣೆ

vijayavani logo
Vivekananda Jayanti Celebration
Published on

ವಿಜಯಪುರ: ದ್ರೋಣ ಕರಿಯರ್​ ಅಕಾಡೆಮಿ ಹಾಗೂ ಗದಗಿನ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನ ಆಶ್ರಯದಲ್ಲಿ ಜ.13ರಂದು ಸಂಜೆ 5.30ಕ್ಕೆ ನಗರದ ಕಂದಗಲ್​ ಹನುಮಂತರಾಯ ರಂಗಮಂದಿರದಲ್ಲಿ ವಿವೇಕಾನಂದರ ಜಯಂತಿ ಸಂಭ್ರಮಾಚರಣೆ ಹಾಗೂ ಬ್ರಹ್ಮಚರ್ಯ ಆಶ್ರಮದಿಂದ ಸನ್ಯಾಸ ಸ್ವೀಕರಿಸಲು ಹಿಮಾಲಯಕ್ಕೆ ತೆರಳುತ್ತಿರುವ ಗದಗಿನ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಬ್ರಹ್ಮಚರ್ಯ ಅದ್ವೆತ ಚೈತನ್ಯ (ಪುನಿತ ಮಹಾರಾಜ)ರಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ದ್ರೋಣ ಕರಿಯರ್​ ಅಕಾಡೆಮಿಯ ಎಂ.ಡಿ. ಕಲ್ಮೇಶ ಆಸಂಗಿ ತಿಳಿಸಿದ್ದಾರೆ.

ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷ,ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸುವರು.

ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನರೇಶಾನಂದಜಿ ಮಹಾರಾಜ, ಕೃಪಾಮಯಿ ಶಾರದಾಶ್ರಮದ ಕೈವಲ್ಯಮಯಿ ಮಾತಾಜಿ, ಹುಲ್ಯಾಳ, ಜಮಖಂಡಿ ಗುರುದೇವಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಕಲ್ಯಾಣ ಕಾಖಂಡಕಿ ಗುರುದೇವಾಶ್ರಮದ ಶ್ರೀ ಶಿವಯೋಗಿಶ್ವರ ಸ್ವಾಮೀಜಿ, ಬಾಗಲಕೋಟೆ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶುಕದೇವಾನಂದಜಿ ಮಹಾರಾಜ, ಮನಗೂಳಿ ವಿವೇಕಾನಂದ ಸೇವಾ ಕೇಂದ್ರದ ಆಡಳಿತಾಧಿಕಾರಿ ಮೋಪ್ರಾಣ ಮಾತಾಜಿ, ಧಾರವಾಡ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯ ಸಂಗಮೇಶ ಬಬಲೇಶ್ವರ, ಉದ್ಯಮಿ ರಾಜು ಬಿಜ್ಜರಗಿ, ವೈದ್ಯೆ ಡಾ. ಜಯಶ್ರೀ ಮುಂಡೇವಾಡಿ, ಹೋಟೆಲ್​ ಉದ್ಯಮಿ ಶಾಂತೇಶ ಕಳಸಗೊಂಡ ಉಪಸ್ಥಿತರಿರುವರು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net