

ಉಡುಪಿ: ಪ್ರೀತಿ, ಪ್ರೇಮ ಹಾಗೂ ದುಶ್ಚಟಗಳಿಗೆ ಬಲಿಯಾಗಿ ಇಂದಿನ ಯುವ ಪೀಳಿಗೆ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ವಿವೇಕಾನಂದರ ಸಂದೇಶಗಳು ಯುವಕರಿಗೆ ದಾರಿದೀಪವಾಗಿದೆ. ದೇಶಕ್ಕಾಗಿ ಜೀವನ ಮುಡಿಪಾಗಿಟ್ಟ ಮಹಾಪುರುಷರು ನಮಗೆ ಆದರ್ಶವಾಗಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಹೇಳಿದರು.
ಶುಕ್ರವಾರ ಕಾತ್ಯಾಯಿನಿ ನಗರದಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಸ್ವಾಮಿ ವಿವೇಕಾನಂದ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಟನೆ ಪ್ರಮುಖರಾದ ಸುರೇಶ್ ಮತ್ತು ಅನುರಾಧಾ ಮಾತನಾಡಿದರು. ವಿಜಯಲಕ್ಷಿ ಕೆ. ಜಗದೀಶ್, ಉಷಾ, ಚೈತ್ರಾ, ರಾಜೇಂದ್ರ, ರಾವೇಂದ್ರ, ಸಂಕೇತ್, ರವೀಶ್, ಪ್ರಭಾಕರ, ಸುಚೇತಾ, ಆನಂದ ಜೆ. ಕೃಷ್ಣ ಕೆ. , ಪ್ರಸಾದ್ ಆರ್ ಮೊದಲಾದವರಿದ್ದರು.