

ಉಪ್ಪಿನಬೆಟಗೇರಿ: ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ, ಭವ್ಯ ಭಾರತ ನಿರ್ವಣದ ಸಂಕಲ್ಪ ತೊಟ್ಟ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ದೇಶ ಕಂಡ ಮಹಾ ಸಂತರಲ್ಲಿ ಒಬ್ಬರಾಗಿದ್ದರು ಎಂದು ಗ್ರಾಪಂ ಸದಸ್ಯ ಮಡಿವಾಳಪ್ಪ ಶಿಂದೋಗಿ ಹೇಳಿದರು.
ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಪಂ ಸದಸ್ಯ ಸೋಮು ಅಂಗಡಿ ಮಾತನಾಡಿ, ರಾಷ್ಟ್ರೀಯ ಯುವ ದಿನದಂದು ವೈಯಕ್ತಿಕ ಅಭಿವೃದ್ಧಿ, ಸಮಾಜ ಮತ್ತು ರಾಷ್ಟ್ರ ನಿರ್ವಣಕ್ಕೆ ಧನಾತ್ಮಕವಾಗಿ ಕೊಡುಗೆ ನೀಡಲು ಯುವಕರನ್ನು ಪ್ರೇರೇಪಿಸಲು ಮತ್ತು ಪೋ›ತ್ಸಾಹಿಸಲು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ ಎಂದರು.
ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಿಹಿ ಹಂಚಲಾಯಿತು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಾನಂದ ದೇಶನೂರ, ಸೋಮಶೇಖರ ಗೋಡೆಕಟ್ಟಿ, ಶಿವಾನಂದ ಹಟ್ಟಿ, ಅಣ್ಣಪ್ಪ ನೀಲವಾಣಿ, ರುದ್ರಪ್ಪ ಮಸೂತಿ, ಮಹಾಂತೇಶ ಅಮರಶೆಟ್ಟಿ, ರಮೇಶ ಮಸೂತಿ, ನಾಗಪ್ಪ ಬರಬರಿ, ಮಂಜುನಾಥ ಶಿರೂರ, ಆರೂಢ ಆಯಟ್ಟಿ, ರಮೇಶ ಮಡಿವಾಳರ, ನಾಗಪ್ಪ ಹೆಬ್ಬಳ್ಳಿ, ಪ್ರಭು ಬರಬರಿ, ಶಿವಪ್ಪ ಆಯಟ್ಟಿ, ಬಸವರಾಜ ಕೋರಕೊಪ್ಪ, ಪ್ರವೀಣ ಅಗಸನಳ್ಳಿ ಸೇರಿ ಬಿಜೆಪಿ ಕಾರ್ಯಕರ್ತರು, ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.