ವಿವೇಕಾನಂದ ಯುವಶಕ್ತಿಯ ಪ್ರತೀಕ

13M.D.R.1
ಕೊಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿವೇಕಾನಂದರ ಜನ್ಮದಿನವನ್ನು ಆಚರಿಸಲಾಯಿತು. ಡಾ.ಅಣ್ಣಯ್ಯ ತೈಲೂರು, ಸರ್ವ ಮಂಗಳಾ, ಕುಮಾರ್, ವೆಂಕಟೇಶ್, ಭವಾನಿ ಇದ್ದರು.
Published on

ಮದ್ದೂರು; ಸ್ವಾಮಿ ವಿವೇಕಾನಂದರು ಯುವಕರ ಆತ್ಮಶಕ್ತಿಯ ಸಂಕೇತದಂತಿದ್ದರು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯ ಪಟ್ಟರು.

ತಾಲೂಕಿನ ಕೊಪ್ಪದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಯುವಕರು ದೇಶದ ಆಸ್ತಿ, ದೇಶದ ಭದ್ರತೆಗೆ ಅವರ ಕೊಡುಗೆ ಹೆಚ್ಚಾಗಿ ಸಿಗಬೇಕೆಂದು ಬಯಸಿದ್ದ ವಿವೇಕಾನಂದರು ಯುವಶಕ್ತಿಯ ಪ್ರತೀಕ ಎಂದರೆ ತಪ್ಪಾಗಲಾರದು. ಅಂತಹವರ ತತ್ವ ಮತ್ತು ಆದರ್ಶಗಳನ್ನು ಯುವಕರು ಅಳವಡಿಸಿಕೊಂಡಾಗ ಮಾತ್ರ ಅವರ ಜನ್ಮದಿನಕ್ಕೆ ಅರ್ಥ ಬಂದಂತೆ ಎಂದರು.

ಕನ್ನಡ ಉಪನ್ಯಾಸಕಿ ಸರ್ವಮಂಗಳಾ, ಪ್ರಥಮ ದರ್ಜೆ ಸಹಾಯಕಿ ಕುಮಾರಿ, ಸಹಾಯಕ ವೆಂಕಟೇಶ್, ಭವಾನಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net