ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ

30-msk-2
ಯುವ ಬ್ರಿಗೇಡ್ ಸಂಘಟನೆಯಿಂದ ರಾಕ್ ಡೇ ಆಚರಣೆ ಮಾಡಲಾಯಿತು. ಗಚ್ಚಿನ ಹಿರೇಮಠದ ಶ್ರೀ ವರರುದ್ರಮುನಿ ಸ್ವಾಮೀಜಿ, ಗುರುಕುಲ ಕೇಂದ್ರದ ಪ್ರಮೋದ್, ಯುವ ಬ್ರಿಗೇಡ್‌ನ ಪ್ರಮುಖ ಡಾ.ಮಲ್ಲಿಕಾರ್ಜು ಇತ್ಲಿ ಇದ್ದರು
Published on

ಮಸ್ಕಿ: ಮಹನೀಯರ ಚರಿತ್ರೆಯನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವಲ್ಲಿ ನಾಟಕ ಪ್ರಮುಖ ಪಾತ್ರವಹಿಸುತ್ತದೆ ಎಂದು ಶ್ರೀ ವರರುದ್ರಮುನಿ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಯುವ ಬ್ರಿಗೇಡ್‌ನಿಂದ ಹಮ್ಮಿಕೊಂಡಿದ್ದ ರಾಕ್ ಡೇ ಅಂಗವಾಗಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.

ಯುವಜನತೆ ವಿವೇಕಾನಂದರ ಆದರ್ಶಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶವನ್ನು ಸುಭದ್ರತೆಗೊಳಿಸಬೇಕು ಎಂದರು. ಯುವ ಬ್ರೀಗೇಡ್‌ನ ಪ್ರಮುಖ ಡಾ.ಮಲ್ಲಿಕಾರ್ಜುನ ಇತ್ಲಿ , ಸಿಂಧನೂರಿನ ರಾಮಕೃಷ್ಣ ಆಶ್ರಮದ ಶಿವಾನಂದ ಮಹಾರಾಜ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net