ಸವಾಲು ಎದುರಿಸಲು ಶಿಕ್ಷಣ ಪ್ರೇರಕ ಶಕ್ತಿ ; ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅಭಿಮತ

0712KLB10
ಕಲಬುರಗಿಯ ವಿವೇಕಾನಂದ ವಿದ್ಯಾನಿಕೇತನ ಶಾಲೆ ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಟ್ರೋಫಿ ವಿತರಿಸಿದರು. ಸಿದ್ದಪ್ಪ ಭಗವತಿ, ಸುವರ್ಣ ಭಗವತಿ ಇತರರಿದ್ದರು.
Published on

 ವಿವೇಕಾನಂದ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಅಂಕ ಭವಿಷ್ಯದ ನಿರ್ಣಾಯಕ ಅಂಶ ಎನ್ನುವುದಕ್ಕಿಂತಲೂ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಶಿP್ಷÀಣ ಪ್ರೇರಕ ಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹೇಳಿದರು.

ಕರುಣೇಶ್ವರ ನಗರದ ವಿವೇಕಾನಂದ ವಿದ್ಯಾನಿಕೇತನ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡೋತ್ಸವದಲ್ಲಿ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ಅವರು, ಶಿP್ಷÀಣ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆ ನಾಯಕತ್ವ ಗುಣ, ಮತ್ತೊಬ್ಬರ ಗೌರವಿಸುವುದನ್ನು ಕಲಿಸುವುದರ ಜತೆಗೆ ವ್ಯಕ್ತಿತ್ವ ವಿಕಸನಕ್ಕೂ ಪೂರಕವಾಗಿದೆ ಎಂದರು.

ನಾನೇನು ಪ್ರತಿಭಾನ್ವಿತ ವಿದ್ಯಾರ್ಥಿ ಆಗಿರಲಿಲ್ಲ. ಆದರೆ ಶ್ರದ್ಧಾಪೂರ್ವಕ ಓದು ನನ್ನನ್ನು ಟಾಪ್ ಹತ್ತರಲ್ಲಿ ಒಬ್ಬನನ್ನಾಗಿಸಿತು. ಅಂತಲೇ ಮುಂದೆ ಐಪಿಎಸ್ ಮಾಡಲು ಸಾಧ್ಯವಾಯಿತು ಎಂದು ತನ್ನ ಶೈಕ್ಷಣಿಕ ಪಯಣದ ಮೇಲೆ ಬೆಳಕು ಚೆಲ್ಲಿದರು.

ಪ್ರಾಂಶುಪಾಲ ಸಿದ್ದಪ್ಪ ಭಗವತಿ ಮಾತನಾಡಿ, ಮಕ್ಕಳು ಶಿP್ಷÀಣದಿಂದ ಬದ್ಧತೆ ಹಾಗೂ ಸಕಾರಾತ್ಮಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಮೊಬೈಲï‌ನಲ್ಲಿ ಆಡದೆ ಮೈದಾನದಲ್ಲಿ ಆಟವಾಡಿ ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವೇಕಾನಂದ ಶಿP್ಷÀಣ ಸಂಸ್ಥೆ ಅಧ್ಯP್ಷÀ ಸುವರ್ಣ ಭಗವತಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ನಾಯಕರಾದ ಭೂಮಿಕಾ ಹಾಗೂ ಶ್ರೇಯಸ್ ನೇತೃತ್ವದಲ್ಲಿ ಮಕ್ಕಳು ಪಥಸಂಚಲನ ಮೂಲಕ ಗೌರವÀ ವಂದನೆ ಸಲ್ಲಿಸಿದರು.

ಶಿP್ಷÀಣ ಸಂಯೋಜಕ ನಿಖಿಲï ಪಾಟೀಲï, ಶಿP್ಷÀಕರಾದ ಆನಂದ ಔರಾದಕರ್, ಸುಧಾ ಹಡಗಲಿಕರ್, ಶಿಬಾ ರುಚಿತಾ ವೀP್ಷÀಕ ವಿವರಣೆ ನೀಡಿದರು. ಶಿP್ಷÀಣ ಸಂಯೋಜಕಿ ಸುಮಾ ಭಗವತಿ ನಿರೂಪಣೆ ಮಾಡಿದರು. ಶಿP್ಷÀಕಿ ರತ್ನಾ ವಂದಿಸಿದರು.

ದೈಹಿಕ ಶಿP್ಷÀಣ ಶಿP್ಷÀಕರಾದ ಮಹೇಶ ಹಾಗೂ ಮೋನಪ್ಪ ಅವರನ್ನು ಗೌರವಿಸಲಾಯಿತು. ಮಕ್ಕಳು ಪ್ರಸ್ತುತಪಡಿಸಿದ ಡೆಂಬಲ್ಸ್ ನೃತ್ಯ ಆಕರ್ಷಣೆಯಾಗಿತ್ತು. ಯಮುನಾ ತಂಡ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಕಾವೇರಿ ತಂಡ ೨ನೇ ಹಾಗೂ ಕೃಷ್ಣಾ ತಂಡ ತೃತೀಯ ಸ್ಥಾನ ಪಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net