ಸ್ವಾಮಿ ವಿವೇಕಾನಂದಮೂರ್ತಿ ಸ್ವಚ್ಛತೆ

IMG_20240324_204533_121.jpg
Published on

ಹುಬ್ಬಳ್ಳಿ: ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮ, ಶ್ರೀಮಾತಾ ಆಶ್ರಮ, ಸಕ್ಷಮ, ಯುವಾ ಬ್ರಿಗೇಡ್, ನಿರಾಮಯ ಫೌಂಡೇಷನ್ ಮತ್ತು ಆಟೋ ಚಾಲಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ರೈಲು ನಿಲ್ದಾಣ ಬಳಿಯ ಸ್ವಾಮಿ ವಿವೇಕಾನಂದರ ಮೂರ್ತಿ ಹಾಗೂ ಆವರಣ ಸ್ವಚ್ಛತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂರ್ತಿ, ಆವರಣದ ಸುತ್ತ-ಮುತ್ತ ಸ್ವಚ್ಛಗೊಳಿಸಿ, ನೀರಿನಿಂದ ತೊಳೆಯಲಾಯಿತು.

ಮಾತಾ ತೇಜೋಮಯಿ ಅವರು ಸಾನ್ನಿಧ್ಯ ವಹಿಸಿದ್ದರು. ಡಾ. ನಾಗಲಿಂಗ ಮುರಗಿ, ನಾಗರಾಜ ಬಡಿಗೇರ, ಡಾ. ಶರತ ಶೆಟ್ಟಿ, ಶ್ರೀಧರ ಭಂಡಾರಿ, ಡಾ. ಬಬ್ರುವಾಡ ಪಾಲ್ಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net