ಶಿಕ್ಷಕರಿಗೆ ವಿವೇಕ ಸ್ಫೂರ್ತಿ ಕಾರ್ಯಾಗಾರ

8
Published on

ಮೈಸೂರು: ಸ್ವಾರ್ಥಮಯ ಜೀವನ ಲೋಭಕ್ಕೆ ಎಡೆಮಾಡಿಕೊಡುತ್ತದೆ. ಅದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮಹಾಮೇಧಾನಂದ ಹೇಳಿದರು.

ಯಾದವಗಿರಿಯ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಜಿಲ್ಲೆಯ ಎಲ್ಲ 40 ವಸತಿ ನಿಲಯಗಳ ಶಿಕ್ಷಕರಿಗಾಗಿ ಆಯೋಜಿಸಿದ್ದ ವಿವೇಕ ಸ್ಫೂರ್ತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ನಡತೆಯು ಮಾದರಿಯಾಗಬೇಕು. ಮೌಲ್ಯಗಳಿಂದ ತುಂಬಿರಬೇಕು. ಅದಕ್ಕೆ ಶಿಕ್ಷಣ ಅಗತ್ಯ. ಹೀಗಾಗಿ ಎಲ್ಲರೂ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳು ಏಕಾಗ್ರತೆ ಬೆಳೆಸಿಕೊಳ್ಳಬೇಕು. ಅದಕ್ಕೆ ಧ್ಯಾನ ಮಾಡಬೇಕು ಎಂದು ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದ ಅವರು ‘ಹುಟ್ಟಿನಿಂದಲೇ ಪಶುತ್ವವಿರುತ್ತದೆ. ಅದನ್ನು ಕಳೆಯಲು ಯತ್ನಿಸಿದರೆ ಜಗತ್ತಿನಲ್ಲಿ ಮಾನವತ್ವ ಬೆಳಗುತ್ತದೆ’ ಎಂದಿದ್ದರು. ಕುವೆಂಪು ಅವರೂ ‘ವಿಶ್ವಮಾನವ ಸಂದೇಶದಲ್ಲೂ ಮನುಷ್ಯತ್ವ ಬೆಳೆಸಿಕೊಳ್ಳಬೇಕೆಂದು’ ಸಲಹೆ ನೀಡಿದ್ದರು ಎಂದು ಸ್ಮರಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಎನ್.ಮುನಿರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರಾಘವೇಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕೃಷ್ಣಮೂರ್ತಿ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯಾಧಿಕಾರಿಗಳಾದ ಅಶ್ವತಪ್ಪ, ವೀರಭದ್ರಸ್ವಾಮಿ, ಎಂ.ಎಸ್.ರಘು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net