ಸಂಶೋಧನೆಯಲ್ಲಿ ಗಾಂಧಿವಾದ ಅಳವಡಿಕೆ ಅಗತ್ಯ: ಪ್ರೊ. ವಿವೇಕ ರೈ

IMG-20220906-WA0002
Published on

ಉಡುಪಿ : ಸಂಶೋಧನೆಗಳು ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು. ಭಾಷೆ ಮತ್ತು ಸಾಹಿತ್ಯದ ಹೊರಗೂ ಸಂಶೋಧನ ಕ್ಷೇತ್ರ ವಿಸ್ತರಣೆಯಾಗಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಂಶೋಧನೆಗಳಲ್ಲಿ ಗಾಂಧಿವಾದ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಜಾನಪದ ವಿದ್ವಾಂಸ ಡಾ.ಬಿ.ಎ. ವಿವೇಕ ರೈ  ಹೇಳಿದರು.

ಮಂಗಳವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಯಾವುದಾದರೊಂದು ವಿಷಯದಲ್ಲಿ ಪಿಎಚ್ ಡಿ ಹೊಂದುವುದಕ್ಕಿಂತ  ಎಲ್ಲಾ ವಿಷಯಗಳ ಜ್ಞಾನ ಪಡೆಯುವುದು ಮುಖ್ಯ. ಜಾತಿ ಮತ ಧರ್ಮವೇ ಇಂದಿನ ಹೆಗ್ಗುರುತಾಗಿದ್ದು, ಸರ್ವ ಧರ್ಮ ಸಮನ್ವಯಕ್ಕೆ ಪ್ರಚಾರದ ಹಣೆಪಟ್ಟಿ ಲಭಿಸುತ್ತಿದೆ ಎಂದು ಹೇಳಿದರು.

ಪ್ರಶಸ್ತಿ ಜೊತೆಗೆ ಲಭಿಸಿದ 1 ಲಕ್ಷ ರೂ. ಮೊತ್ತವನ್ನು ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಪುಣಚ ಸರ್ಕಾರಿ ಶಾಲೆಗೆ ದೇಣಿಗೆಯಾಗಿ ನೀಡುವುದಾಗಿ ವಿವೇಕ ರೈ ಪೋಷಿಸಿದರು.

ಮುಖ್ಯ ಅತಿಥಿಗಳಾಗಿ ಮಾಹೆಯ ಸಹಕುಲಪತಿ ಡಾ. ಎಂ. ವೆಂಕಟರಾಯ ಪ್ರಭು ಭಾಗವಹಿಸಿದ್ದರು.  ಅಧ್ಯಕ್ಷತೆಯನ್ನು ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಕಾರಂತ್ ವಹಿಸಿದ್ದರು. ಡಾ. ತಾಳ್ತಜೆ ವಸಂತ ಕುಮಾರ್ ಅಭಿನಂದನಾ ಭಾಷಣ ಮಾಡಿದರು.   ಡಿ. ಬನುಮಯ್ಯ ಕಾಲೇಜು ಮೈಸೂರು  ನಿವೃತ್ತ ಪ್ರಾಚಾರ್ಯ ಪ್ರೊ. ಎಸ್. ಶಿವಾಜಿ ಜೋಯಿಸ್ ಅವರು ಗೋವಿಂದ ಪೈ ಗ್ರಥನ ಕೌಶಲ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net