‘ವಿವಾದ್ ಸೆ ವಿಶ್ವಾಸ್’ ಸಂವಾದ ಕಾರ್ಯಕ್ರಮ

18Imam1-Web
ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಆದಾಯ ತೆರಿಗೆ ಇಲಾಖೆ ವಲಯ ನಿರೀಕ್ಷಕ ಪಂಪಾಪತಿ ದೇಸಾಯಿ ಮಾತನಾಡಿದರು. ರಾಜೇಶ್ವರಿ ಮೆನನ್, ಚೇತನ ಕಲಮಕರ್, ಟಿ.ಡಿ. ಕಾಟ್ವಾ ಇತರರು ಇದ್ದರು.
Published on

ಬೆಳಗಾವಿ: ಟಿಳಕವಾಡಿಯ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ (ಐಸಿಎಐ) ಭವನದಲ್ಲಿ ಆದಾಯ ತೆರಿಗೆ ಇಲಾಖೆ ಆಶ್ರಯದಲ್ಲಿ ಗುರುವಾರ ತೆರಿಗೆ ವಿವಾದಗಳನ್ನು ವಿಶ್ವಾಸದಿಂದ ಬಗೆಹರಿಸಿಕೊಳ್ಳುವ ‘ವಿವಾದ್ ಸೆ ವಿಶ್ವಾಸ್-2020’ ಯೋಜನೆ ಕುರಿತು ಸಂವಾದ ಕಾರ್ಯಕ್ರಮ ಜರುಗಿತು. ಆದಾಯ ತೆರಿಗೆ ಇಲಾಖೆ ಬೆಳಗಾವಿ ವಲಯದ ಜಂಟಿ ಆಯುಕ್ತೆ ರಾಜೇಶ್ವರಿ ಮೆನನ್, ಉಪ ಆಯುಕ್ತ ಚೇತನ ಕಲಮಕರ್, ವಲಯ ನಿರೀಕ್ಷಕ ಪಂಪಾಪತಿ ದೇಸಾಯಿ ಅವರು, ತೆರಿಗೆ ಪಾವತಿದಾರರು ಹಾಗೂ ಲೆಕ್ಕ ಪರಿಶೋಧಕರು, ಇತರ ಪಾಲುದಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಯೋಜನೆ ಅನುಕೂಲತೆಗಳ ಕುರಿತು ಸಮಗ್ರವಾಗಿ ವಿವರಿಸಿದರು. ಹಿರಿಯ ಕೈಗಾರಿಕೋದ್ಯಮಿ ಟಿ.ಡಿ. ಕಾಟ್ವಾ ಅವರು ಈ ಯೋಜನೆಯಡಿ ತೆರಿಗೆ ವ್ಯಾಜ್ಯ ಸುಲಭವಾಗಿ ಬಗೆಹರಿಸಿಕೊಂಡ ಕುರಿತು ಮಾಹಿತಿ ನೀಡಿದರು. ನೀತು ಭಟ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net