ವಿಟ್ಲ ಅಂಗಡಿ ಶಟರ್ ನಲ್ಲಿ ನೇಮ್ ಜಿಹಾದ್ ಬರವಣಿಗೆ

IMG-20221013-WA0020
Published on

ವಿಟ್ಲ: ಅಂಗಡಿಯೊಂದರ ಶಟರ್ ನಲ್ಲಿ ಯಾರೋ ಕಿಡಿಗೇಡಿಗಳು ‘ನೇಮ್ ಜಿಹಾದ್’ ಎಂದು ಬರೆದ ಘಟನೆ ವಿಟ್ಲ ಪೇಟೆಯ ಹೃದಯ ಭಾಗದಲ್ಲಿರುವ ದೀಪಕ್ ವಾಚ್ ವರ್ಕ್ಸ್ ನಲ್ಲಿ ನಡೆದಿದೆ.

ಅ.11 ರಂದು ರಾತ್ರಿ ವೇಳೆ ಘಟನೆ ನಡೆದಿದ್ದು, ಅ.12 ರಂದು ಮುಂಜಾನೆ ಅಂಗಡಿ ಮಾಲೀಕರು ಬಾಗಿಲು ತೆಗೆಯಲು ಬಂದು ನೋಡಿದಾಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಂಗಡಿ ಮಾಲೀಕ ಅಬ್ದುಲ್ ವಿಟ್ಲ ಠಾಣೆಗೆ ದೂರು ನೀಡಿದ್ದು, ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಯಾರೋ ಇಬ್ಬರು ಬರುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net