ಜಾಗದ ತಕರಾರು ತಮ್ಮನಿಂದ ಅಣ್ಣನ ಕೊಲೆ

images (1)
Published on

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಗಲಭೆ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ಕೊಡಂಗೆ ಬನಾರಿಯಲ್ಲಿ ನಡೆದಿದೆ.

ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದು, ಪದ್ಮನಾಭ (49) ಕೊಲೆ ಮಾಡಿದ್ದೆನ್ನಲಾಗಿದೆ. ಕುಡಿದು ಮನೆಯಲ್ಲಿ ಆಗಿಂದಾಗ ಗಲಾಟೆ ಸಂಭವಿಸುತ್ತಿದ್ದು, ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ಕೊಲೆಯಾಗಿದ್ದ ಬಗ್ಗೆ ವಿಟ್ಲ ಠಾಣೆಗೆ ದೂರು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net