ಕಣ್ಮನ ಸೆಳೆದ ಮಕ್ಕಳ ವಿಠ್ಠಲ ವಾರಿ

24 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಸಾಫಲ್ಯ ಪ್ರತಿಷ್ಠಾನದ ಸಂಸ್ಕೃತ ಶಿಶು ಮಂದಿರ ವತಿಯಿಂದ ಇಲ್ಲಿನ ಯಾಲಕ್ಕಿಶೆಟ್ಟರ್ ಕಾಲನಿಯಲ್ಲಿ ಗುರುವಾರ ಆಯೋಜಿಸಿದ್ದ ಶಿಶುಗಳ ವಿಠ್ಠಲ ವಾರಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
ಪಾಲಿಕೆ ಸದಸ್ಯ ಶಂಕರ ಶೇಳಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ನಮ್ಮ ಸಂಸ್ಕೃತಿ ಅರಿಯಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಶಿಶುಗಳಿದ್ದಾಗಲೇ ನಮ್ಮ ಆಚಾರ, ವಿಚಾರ, ಸಂಸ್ಕೃತಿಗಳನ್ನು ಮಕ್ಕಳಲ್ಲಿ ಬಿತ್ತಿದರೆ ಉತ್ತಮ ಹಾದಿಯಲ್ಲಿ ಸಾಗುತ್ತಾರೆ ಎಂದರು.
ಶಿಶು ಮಂದಿರ ಸಂಸ್ಥಾಪಕಿ ಮೃಣಾಲ ಜೋಶಿ ಮಾತನಾಡಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮಾಜ ಶಕ್ತಿಶಾಲಿಯಾಗಿ ಬೆಳೆಯಲಿದೆ. ವಿಠ್ಠಲ ಭಜನೆಯಿಂದ ಹೃದಯ ಸಂಬಂಧಿ ಕಾಯಿಲೆ ಸಹ ದೂರವಾಗಲಿದೆ ಎಂಬುದು ಸಾಬೀತಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ರಮೇಶ ಹೆಬ್ಬಳಿ ಮಾತನಾಡಿದರು. ವಿಠ್ಠಲ-ರುಕ್ಮಿಣಿ ವೇಷ ಧರಿಸಿದ್ದ ಮಕ್ಕಳು ವಿಠ್ಠಲನ ನಾಮಸ್ಮರಣೆ ನಡೆಸಿದರು. ವಿಜಯಾ ನಾಯ್ಕ, ಸಂಗೀತಾ ಜಾಧವ, ಅರುಂಧತಿ, ಕರಿಯಪ್ಪ ಸುಣಗಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net