ವಿಠ್ಠಲ ಉತ್ಸವ ಮೂರ್ತಿ ಮೆರವಣಿಗೆ

10MDG2 UTSAVA
Published on

ಮುಂಡರಗಿ: ಪಟ್ಟಣದ ಶ್ರೀ ಪಂಢರಾಪುರ ವಿಠ್ಠಲ ಮಂದಿರದ 44ನೇ ವಾರ್ಷಿಕೋತ್ಸವ ಹಾಗೂ ಪಂಢರಾಪುರದ ನಾಮದೇವ ಮಹಾರಾಜರ ಪುಣ್ಯತಿಥಿ ಅಂಗವಾಗಿ ಶ್ರೀ ವಿಠ್ಠಲ ಉತ್ಸವ ಮೂರ್ತಿ ಮೆರವಣಿಗೆಯು ಸಂಭ್ರಮದಿಂದ ನಡೆಯಿತು.


ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯ, ಕೀರ್ತನೆ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಸಂಭ್ರಮ ಸಡಗರದಿಂದ ಉತ್ಸವ ನಡೆಯಿತು. ಶಂಕರಪ್ಪ ಭೀಸೆ, ಪುಂಡಲಿಕಪ್ಪ ಭೀಸೆ, ನಾಗಪ್ಪ ಗಾಯಕ್ವಾಡ, ರಮೇಶ ಭೀಸೆ, ವಾಸುದೇವ ಭೀಸೆ, ಶಾರದಾ ಭೀಸೆ, ಕವಿತಾ ಭೀಸೆ, ರೇಣುಕಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net