ಮಲಪ್ರಭಾ ನದಿ ಸ್ವಚ್ಛತೆಗೊಳಿಸಿದ ಶಾಸಕ ಹಲಗೇಕರ

23KHANAPUR4A
Published on

ಖಾನಾಪುರ: ಇಲ್ಲಿನ ಮಲಪ್ರಭಾ ನದಿ ಘಾಟ್‌ನಲ್ಲಿ ದೆಹಲಿಯ ಖಾನಾಪುರ ಶಾಖೆಯ ಸಂತ ನಿರಂಕಾರಿ ಮಂಡಲವು ಭಾನುವಾರ ಬೆಳಗ್ಗೆ ಶಾಸಕ ವಿಠ್ಠಲ್ ಹಲಗೇಕರ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿತು.

ನದಿ ದಂಡೆಯ ದಕ್ಷಿಣ ಪ್ರದೇಶ ವಿಪರೀತ ದುರ್ವಾಸನೆ ಮತ್ತು ಕಸದಿಂದ ತುಂಬಿತ್ತು. ಮೆಟ್ಟಿಲುಗಳ ಮೇಲೆ ಮಣ್ಣು ಸಂಗ್ರಹವಾಗಿದ್ದನ್ನು ಶಾಸಕರು ಗಮನಿಸಿ ಶುಚಿಗೊಳಿಸಿದರು. ಮಂಡಲದ ಸೇವಾದಳದ ಅನೇಕ ಸ್ವಯಂ ಸೇವಕ ಸಹೋದರಿಯರು ಸಾಥ್ ನೀಡಿದರು.

ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ನಿರಂಕಾರಿ ಮಂಡಲವು ಸ್ವಚ್ಛತೆ ಕಾಪಾಡಿಕೊಳ್ಳುವುದು. ನೀರು ಉಳಿಸುವುದು ಮತ್ತು ಮರ ನೆಡುವ ಮುಂತಾದ ಅನೇಕ ಅಭಿಯಾನದ ಮೂಲಕ ಸಮಾಜಕ್ಕೆ ಉಪಯುಕ್ತವಾಗುವ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬೈಲೂರ್ಕರ, ಸದಸ್ಯರಾದ ಅಪ್ಪಯ್ಯ ಕೊಡೋಲಿ, ಪ್ರಕಾಶ ಬೈಲೂರ್ಕರ, ಜಯಾ ಭುಟ್ಗಿ, ಸಂಯೋಜಕ ಪಿ.ಜ್ಞಾನದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net