ಬೊಬ್ಬೆಕೇರಿಯಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿಯಲ್ಲಿ ರೋಲರ್, ಜೆಸಿಬಿ, ಟಿಪ್ಪರ್ ಸೇರಿ ಎಲ್ಲ ಯಂತ್ರಗಳನ್ನು ಒಬ್ಬನೇ ವ್ಯಕ್ತಿ ನಿಭಾಯಿಸುತ್ತಿದ್ದಾನೆ. ಮೂರು ತಿಂಗಳ ಕಾಲ ಕಾಮಗಾರಿಯನ್ನು ತಡೆಹಿಡಿಯದಿದ್ದರೆ ಪಂಚಾಯಿತಿಗೆ ಭಾರಿ ನಷ್ಟವಾಗಲಿದೆ. ಲೊಕೋಪಯೋಗಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ವಹಿಸದಿದ್ದಲ್ಲಿ ಅವ್ಯವಸ್ಥೆಯ ಆಗರವಾಗಲಿದೆ ಎಂದು ಸದಸ್ಯರು ಎಚ್ಚರಿಸಿದರು.