ವಿಟ್ಲ ಪೇಟೆ ಉಳಿವಿಗೆ ದೈವ-ದೇವರಿಗೆ ಮೊರೆ VITTAL

ವಿಟ್ಲ ಪೇಟೆ ಉಳಿಸಿ ಹೋರಾಟ ಆರಂಭಿಸುವ ನಿಟ್ಟಿನಲ್ಲಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉದ್ಯಮಿಗಳಾದ ಎಚ್.ಜಗನ್ನಾಥ ಸಾಲ್ಯಾನ್, ಸತೀಶ್ ಕುಮಾರ್ ಆಳ್ವ, ಪ್ರಭಾಕರ ಶೆಟ್ಟಿ ದಂಬೆಕಾನ ಇತರರು ಇದ್ದರು.
ವಿಟ್ಲ ಪೇಟೆ ಉಳಿಸಿ ಹೋರಾಟ ಆರಂಭಿಸುವ ನಿಟ್ಟಿನಲ್ಲಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಉದ್ಯಮಿಗಳಾದ ಎಚ್.ಜಗನ್ನಾಥ ಸಾಲ್ಯಾನ್, ಸತೀಶ್ ಕುಮಾರ್ ಆಳ್ವ, ಪ್ರಭಾಕರ ಶೆಟ್ಟಿ ದಂಬೆಕಾನ ಇತರರು ಇದ್ದರು.
Published on
ವಿಟ್ಲ: ವಿಟ್ಲ ಪೇಟೆ ಉಳಿಸಲು ಹೋರಾಟ ಆರಂಭಿಸುವ ನಿಟ್ಟಿನಲ್ಲಿ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹಾಗೂ ಕಡಂಬು ಕಲ್ಕುಡ ಕಲ್ಲುರ್ಟಿ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಇತ್ತೀಚೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿಟ್ಲ ಪೇಟೆ ಅಭಿವೃದ್ಧಿಯ ಸಾಧಕ-ಬಾಧಕ ಚರ್ಚಿಸಲು ಸಭೆ ನಡೆಸಿ ವಿಟ್ಲ ಪೇಟೆ ವಿಸ್ತರಣೆಗೆ ಸಹಕಾರ ಕೋರಿದ್ದರು. ಇದಕ್ಕೆ ಸಭೆಯಲ್ಲಿ ಅಸಮಾಧಾನ ತೋರಿದ್ದ ವ್ಯಾಪಾರಿಗಳು ಇದೀಗ ವಿಭಿನ್ನ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ. ವಿಟ್ಲದಲ್ಲಿ ಬೈಪಾಸ್ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದೆ.
ಉದ್ಯಮಿಗಳಾದ ಎಚ್.ಜಗನ್ನಾಥ ಸಾಲ್ಯಾನ್, ಸತೀಶ್ ಕುಮಾರ್ ಆಳ್ವ, ಪ್ರಭಾಕರ ಶೆಟ್ಟಿ ದಂಬೆಕಾನ, ರಾಮದಾಸ ಶೆಣೈ, ಬಾಬು ಕೊಪ್ಪಳ, ವಿಟ್ಲ ಪೇಟೆಯ ವ್ಯಾಪಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net