ವಿಟ್ಲ:ನಾಲ್ಕುನೂರು ಕೆವಿ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಕಳೆದ ನಾಲ್ಕು ವರ್ಷಗಳಿಂದ ಪ್ರಬಲ ವಿರೋಧವನ್ನು ತೋರಿಸಲಾಗುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿವರೆಗೆ ಒಂದೇ ಒಂದು ಟವರ್ ನಿರ್ಮಾಣಕ್ಕೆ ಅವಕಾಶವ ನೀಡಲಾಗಿಲ್ಲ. ಸ್ಟೆರ್ಲೈಟ್ ಕಂಪನಿಯವರು ಕೇರಳದಲ್ಲಿ ಕೆಲಸ ಪೂರ್ತಿಯಾಗಿದೆ, ದ.ಕ.ಜಿಲ್ಲೆಯಲ್ಲಿ ೩೦ ಟವರ್ ಬೇಸ್ ಕಾಮಗಾರಿ ಆಗಿದೆ ಎಂದು ಸುಳ್ಳು ಹೇಳಿ ದಾರಿತಪ್ಪಿಸುತ್ತಿದ್ದಾರೆ. ರೈತರು ತಮ್ಮ ಜಾಗದೊಳಗೆ ಹೋಗಲು ಬಿಟ್ಟಿಲ್ಲ ಎಂದು ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬಲುಗುತ್ತು ಹೇಳಿದರು.
ಜಿಲ್ಲೆಯ ಹಿರಿಯ ಹಿಂದು ಮುಖಂಡರೋರ್ವರು ಈ ಕಂಪನಿಗೆ ಹಿಂದಿನಿಂದ ಬೆಂಬಲ ನೀಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಅವರು ಹೇಳಿದಂತೆ ಇಲ್ಲಿನ ಶಾಸಕರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆಯವರು ಕೆಲಸ ಮಾಡುತ್ತಿದ್ದಾರೆ. ಆ ಮುಖಂಡ ರೈತ ವಿರೋಽ ಕೆಲಸ ಮಾಡಬಾರದು. ಹಿಂದು ಮುಖಂಡ ಕಂಪನಿ ನೀಡಿದ ಕಾಸಿಗೆ ಕೈ ಚಾಚಿದ ಮಾಹಿತಿ ಸಿಕ್ಕಿದೆ. ಅವರು ಕಂಪನಿಯವರೊಡನೆ ವ್ಯವಹಾರ ಮಾಡುವುದನ್ನು ನಿಲ್ಲಿಸಬೇಕು. ಕಂಪನಿಯವರು ರೈತ ಮುಖಂಡರಿಗೆ ಹಾಗೂ ಸಂತ್ರಸ್ತ ರೈತರಿಗೆ ದೂರವಾಣಿ ಕರೆಯ ಮೂಲಕ ಆಮಿಷ ತೋರಿಸುತ್ತಿದ್ದಾರೆ. ಕಂಪನಿಯವರು ಮನೆ ಮನೆಗೆ ತೆರಳುವುದನ್ನು ಮುಂದುವರಿಸಿದರೆ ಕಚೇರಿಯನ್ನು ಧ್ವಂಸ ಮಾಡಲೂ ಸಿದ್ಧರಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
೪೦೦ ಕೆವಿ ಉಡುಪಿ-ಕಾಸರಗೋಡು ವಿದ್ಯುತ್ ಪ್ರಸರಣ ಮಾರ್ಗ ವಿರೋಽ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ವಿದ್ಯುತ್ ಪ್ರಸರಣ ಮಾರ್ಗ ಕೃಷಿಕರ ಭೂಮಿಯಲ್ಲಿ ಹೋಗುವುದಕ್ಕೆ ಒಪ್ಪಿಗೆಯಿಲ್ಲ. ಕಂಪನಿಯವರು ತಂಡ ಕಟ್ಟಿಕೊಂಡು ಬಂದು ಶೇ.೬೦ರಷ್ಟು ಕೆಲಸವಾಗಿದೆ ಎಂದು ಸುಳ್ಳು ಹೇಳಿ ಜನರನ್ನು ಮೋಸ ಮಾಡುತ್ತಿದ್ದಾರೆ. ರೈತರಿಗೆ ಬೇಡವಾದ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ರಾಜ್ಯ ಸರ್ಕಾರ ಭರವಸೆ ನೀಡಿದ್ದಾರೆ. ರೈತರನ್ನು ಎದುರು ಹಾಕಿಕೊಳ್ಳುವುದು ತೀವ್ರ ತರದ ಪರಿಣಾಮಕ್ಕೆ ಕಾರಣವಾಗಬಹುದು. ಜಮೀನು ಹೋಗುವ ರೈತ ಪ್ರಾಣ ಬಿಡುವುದಕ್ಕೂ ಸಿದ್ಧನಿದ್ದಾನೆ ಎಂದು ಎಚ್ಚರಿಸಿದರು.
ಸಮಿತಿಯ ಕೋಶಾಽಕಾರಿ ಚಿತ್ತರಂಜನ್ ಎನ್. ಎಸ್. ಡಿ., ಸಂತ್ರಸ್ತ ರೈತರಾದ ಅಣ್ಣು ಗೌಡ, ಕೃಷ್ಣಪ್ರಸಾದ್ ವನಭೋಜನ, ಶ್ಯಾಮ್ ವನಭೋಜನ ಉಪಸ್ಥಿತರಿದ್ದರು.