ವಿಟ್ಲ: ಅಪ್ರಾಪ್ತ ವಯಸ್ಕ ಬಾಲಕಿಯನ್ನು ಪುಸಲಾಯಿಸಿ ವ್ಯಕ್ತಿಯೊಬ್ಬ ಬೈಕ್ ನಲ್ಲಿ ಕರೆದುಕೊಂಡು ಹೋಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಮಹಮ್ಮದ್ ನೌಷಾದ್ ಎಂದು ಗುರುತಿಸಲಾಗಿದೆ.
ಆರೋಪಿ ಮಹಮ್ಮದ್ ನೌಷಾದ್ ಎಂಬಾತ ಅಪ್ರಾಪ್ತ ವಯಸ್ಕ ಬಾಲಕಿಯ ಮನೆಯ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಶಾಲೆಗೆ ತೆರಳಿದ್ದ ಆಕೆಯನ್ನು ಪುಸುಲಾಯಿಸಿ ವಿಟ್ಲ ಪೇಟೆಯಿಂದ ಉಳ್ಳಾಲ ಬೀಚಿಗೆ ಹೊಗುವಾ ಎಂದು ಹೇಳಿ ಕರೆದುಕೊಂಡು ಹೋಗಿ ಕೊಡಂಗಾಯಿಯಲ್ಲಿ ದುರ್ನಡತೆ ತೋರಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಾಲಕಿ ಶಾಲೆಗೆ ಬರದಿದ್ದಾಗ ಶಿಕ್ಷಕಿ ಮನೆಯವರಲ್ಲಿ ವಿಚಾರಿಸಿದ್ದಾರೆ. ಈ ವೇಳೆ ವಿಷಯ ತಿಳಿದ ಬಾಲಕಿಯ ತಾಯಿಯು ಆಕೆಯ ಸಹಪಾಠಿಗಳಲ್ಲಿ ವಿಚಾರಿಸಿದಾಗ ಆಕೆಯು ಬಸ್ಸಿನಲ್ಲಿ ಬಂದು ಬೈಕ್ ನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದೆ.