ನಾರಾಯಣ ಗುರುಗಳು ಅಜ್ಞಾನ, ಶೋಷಣೆ, ಅಸಮಾನತೆ ವಿರುದ್ಧ ಕ್ರಾಂತಿ ಮಾಡಿದವರು - ಡಾ. ರಾಜಾರಾಮ

IMG-20230831-WA0031
Published on

ವಿಟ್ಲ: ಅಜ್ಞಾನ, ಶೋಷಣೆ, ಅಸಮಾನತೆ ವಿರುದ್ಧ ಶಾಂತಿಯುತ ಕ್ರಾಂತಿ ಮಾಡಿದವರು. ಅವರ ಸುಧಾರಣೆಯ ಹಾದಿ ಯಾವುದೇ ಸಂಘರ್ಷಕ್ಕೆ ಕಾರಣವಾಗದಿರುವುದು ವಿಶೇಷವಾಗಿದೆ. ಅವರ ಆದರ್ಶದ ಬಗ್ಗೆ ನಾವು ನಮ್ಮ ಮಕ್ಕಳಿಗೆ ತಿಳಿಹೇಳುವ ಕೆಲಸವಾಗಬೇಕು ಎಂದು ವಿಟ್ಲ - ಉಪ್ಪಿ‌ನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ‌.ರಾಜಾರಾಮ್ ಕೆ.ಬಿ. ಹೇಳಿದರು.

ಅವರು ಆ.೩೧ರಂದು ವಿಟ್ಲದಲ್ಲಿರುವ ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿಯವರ 169ನೇ ಗುರು ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ನಾರಾಯಣ ಗುರುಗಳ ಜನ್ಮದಿನಾಚರಣೆ ಕೇವಲ ಆಚರಣೆಗೆ ಸೀಮಿತವಾಗದೆ ಅವರ‌ ಆದರ್ಶವನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳುವ ಮುಖಾಂತರ ಅವರಿಗೆ ಗೌರವ ಸಲ್ಲಿಸುವ ಕೆಲಸವಾಗಬೇಕು. ಆಗ ನಾವು ಮಾಡಿದ‌ ಆಚರಣೆಗಳಿಗೆ‌ ಒಂದು ಅರ್ಥ ಬರುತ್ತದೆ ಎಂದರು.

ಕೆ.ಪಿ.ಸಿ.ಸಿ. ಸದಸ್ಯ ಎಂ.ಎಸ್.ಮಹಮ್ಮದ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು, ಡಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವ, ಪ್ರಭಾಕರ್ ಭಟ್ ಮಾವೆ, ಹಿಂದುಳಿದ ವರ್ಗದ ಜಿಲ್ಲಾ ಸದಸ್ಯ ಚಿತ್ತರಂಜನ್ ಎನ್.ಎಸ್.ಡಿ., ಜಯರಾಮ ಬಲ್ಲಾಳ್, ಶ್ರೀಧರ ಶೆಟ್ಟಿ ಪುಣಚ, ಬಾಲಕೃಷ್ಣ ಶೆಟ್ಟಿ ಬೆಂಗ್ರೋಡಿ, ಸುಧೀರ್ ಕೊಟ್ಯಾನ್ ಉಕ್ಕುಡ, ಸುನಿತಾ ಕೊಟ್ಯಾನ್ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಟ್ಲ ಶ್ರೀನಿವಾಸ ಶೆಟ್ಟಿ ಕೊಲ್ಯ, ಉಕ್ಕುಡ, ವಿಟ್ಲ - ಉಪ್ಪಿನಂಗಡಿ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಏಲ್ಯಣ್ಣ‌ ಪೂಜಾರಿ ಮೈರುಂಡ, ಪರಿಶಿಷ್ಠ ಜಾತಿ ಪಂಗಡಗಳ ಅಧ್ಯಕ್ಷರಾದ ರಾಮಣ್ಣ ಪಿಲಿಂಜ, ಕೋಡಿಂಬಾಡಿ ಗ್ರಾಮಪಂಚಾಯತ್ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಪಟ್ಟಣ ಪಂಚಾಯತ್ ಸದಸ್ಯರಾದ ಅಶ್ರಫ್ ವಿಟ್ಲ, ಉಪಸ್ಥಿತರಿದ್ದರು.

ಚ್ಯೆತನ್ಯ ಪ್ರಾರ್ಥಿಸಿದರು. ಬ್ಲಾಕ್ ವಕ್ತಾರರಾದ ರಮಾನಾಥ ವಿಟ್ಲ ಪ್ರಾಸ್ತಾವನೆಗೈದರು. ವಿಟ್ಲ-ಉಪ್ಪಿನಂಗಡಿ ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ ಸ್ವಾಗತಿಸಿದರು. ಜಗನ್ನಾಥ ಶೆಟ್ಟಿ ನಡುಮನೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net