ಉಚಿತ ಶಿಕ್ಷಣ ಕನ್ನಡ ಮಾಧ್ಯಮವನ್ನು ಉಳಿಸಲು ಸಹಕಾರಿ - ಶೇಷಗಿರಿ ಕಾಮತ್

PTR_21 AUG_12
Published on

ವಿಟ್ಲ: ಸಂಪೂರ್ಣ ಉಚಿತ ಶಿಕ್ಷಣ ನೀಡುವುದು ಉತ್ತಮ ಯೋಜನೆಯಾಗಿದ್ದು ಕನ್ನಡ ಮಾಧ್ಯಮವನ್ನು ಉಳಿಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳ ಬಡತನ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ತಡೆಯುತ್ತದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೆನರಾ ಬ್ಯಾಂಕ್ ನ ನಿವೃತ್ತ ಅಧಿಕಾರಿಯಾದ ಶೇಷಗಿರಿ ಕಾಮತ್ ಹೇಳಿದರು.

ಅವರು ವಿಠಲ ಪ್ರೌಢಶಾಲೆಯ ಉಚಿತ ಶಿಕ್ಷಣ ಯೋಜನೆಗೆ ೫ ಲಕ್ಷ ರೂ ಕೊಡುಗೆಯಾಗಿ ನೀಡಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ವಿಠಲ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಮಾತನಾಡಿ ವಿಠಲ ಪ್ರೌಢಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಉಚಿತ ಶಿಕ್ಷಣ ಸೌಲಭ್ಯವಿದ್ದು, ಸಾವಿರಾರು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದಿದ್ದಾರೆ. ಇನ್ನಷ್ಟು ದಾನಿಗಳಿಂದ ಉಚಿತ ಶಿಕ್ಷಣಕ್ಕೆ ಸಹಾಯವನ್ನು ನಿರೀಕ್ಷಿಸುತ್ತಿದ್ದೇವೆ ಎಂದು ಹೇಳಿದರು.

ವಿಠಲ ಎಜುಕೇಶನ್ ಸೊಸೈಟಿಯ ವತಿಯಿಂದ ಶೇಷಗಿರಿ ಕಾಮತ್ ದಂಪತಿಗಳನ್ನು ಸನ್ಮಾನಿಸಲಾಯಿತು.

ವಿಠಲ ಎಜುಕೇಶನ್ ಸೊಸೈಟಿಯ ಆಡಳಿತ ಮಂಡಳಿಯ ಕೋಶಧಿಕಾರಿ ಬಾಬು ಕೆ, ಸದಸ್ಯರಾದ ನಿತ್ಯಾನಂದ ನಾಯಕ್, ಪದ್ಮಯ್ಯ ಗೌಡ, ಸದಾಶಿವ ಬನ, ಆಡಳಿತಾಧಿಕಾರಿ ಪ್ರಶಾಂತ್ ಚೊಕ್ಕಾಡಿ, ಉಪಪ್ರಾಂಶುಪಾಲ ಕಿರಣಕುಮಾರ್ ಹಾಗೂ ಹಿರಿಯ ಶಿಕ್ಷಕ ಶಂಕರನಾರಾಯಣ ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net