ಹಸಿರು ಕ್ರಾಂತಿಗೆ ಕೈ ಜೋಡಿಸೋಣ: ಡಾ. ಚೂಂತಾರು

IMG-20230820-WA0038
Published on

ವಿಟ್ಲ: ಪರಿಸರದ ಮೇಲೆ ನಿರಂತರ ದೌರ್ಜನ್ಯದಿಂದಾಗಿ ಕಾಡು ಬರಿದಾಗಿ, ಕಾಂಕ್ರೀಟ್ ಕಾಡು ದಿನೇ ದಿನೇ ಬೆಳೆಯುತ್ತಿದೆ. ಪರಿಸರ ಮಾಲಿನ್ಯ ಹೆಚ್ಚುತ್ತಲೇ ಇದೆ. ಇದೇ ರೀತಿ ಮುಂದುವರಿದರೆ ಮುಂದೆ ಹನಿಹನಿ ನೀರಿಗೂ ತತ್ವಾರ ಬರಬಹುದು. ಪರಿಸರದ ಅಸಮತೋಲನವಾಗದಂತೆ ನೋಡಿಕೊಳ್ಳಬೇಕು. ಗಿಡಗಳ ಸಂಖ್ಯೆಯ ಹೆಚ್ಚಿಸಿ ಪರಿಸರದ ಸಮತೋಲನ ಮಾಡಿದಾಗ, ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಹೇಳಿದರು.

ಅವರು ಭಾನುವಾರ ವಿಟ್ಲ ಸರ್ಕಾರಿ ಜೂನಿಯರ್ ಕಾಲೇಜು ವಿಟ್ಲ ಇದರ ಆವರಣದಲ್ಲಿ ಗೃಹರಕ್ಷಕ ದಳದ ವಿಟ್ಲ ಘಟಕದ ವತಿಯಿಂದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿಟ್ಲ ಘಟಕಾಧಿಕಾರಿ ಸಂಜೀವ, ಶಾಲೆ ದೈಹಿಕ ಶಿಕ್ಷಕ ಶ್ರೀನಿವಾಸ, ಮಂಗಳೂರು ಘಟಕದ ಸುನಿಲ್, ದಿವಾಕರ್ ಸಂದೇಶ, ಇತರ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net