ಪಿ. ರಾಧಾಕೃಷ್ಣ ಪೈ ಅವರ ಛಾಯಾಗ್ರಹಣ ಕುರಿತ ಒಂದು ಗರಿಯ ಕಥೆ ವಿಶೇಷ ಪುಸ್ತಕದ ಬಿಡುಗಡೆ ನಡೆಯಿತು. ಕೆ.ಉಲ್ಲಾಸ್ ಕಾಮತ್, ಜಯಪ್ರಕಾಶ್ ವಿ., ಅನಂತಕೃಷ್ಣ ಹೆಬ್ಬಾರ್, ಶ್ರೀಧರ್ ಕೊಡಕ್ಕಲ್, ಡಾ.ಅರುಂಧತಿ ಧಾರೇಶ್ವರ್ ಇದ್ದರು.
ವಿಟ್ಲ: ಸಮಯವನ್ನು ವ್ಯರ್ಥ ಮಾಡದೆ ಹವ್ಯಾಸಗಳಿಗೆ ಬಳಸಿಕೊಳ್ಳಬೇಕು. ನಿಸರ್ಗ ಪೊಟೋಗಳ ಪ್ರದರ್ಶನ ಎಲ್ಲ ಕಡೆ ನಡೆಸುವ ಜತೆಗೆ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿರಬೇಕು ಎಂದು ಬೆಂಗಳೂರಿನ ಯು.ಕೆ. ಆಂಡ್ ಕೋ ಫೌಂಡರ್ ಕೆ.ಉಲ್ಲಾಸ್ ಕಾಮತ್ ಹೇಳಿದರು.
ವಿಟ್ಲ ಹನುಮಗಿರಿಯಲ್ಲಿ ಪಿ.ರಾಧಾಕೃಷ್ಣ ಪೈ ಅವರ ಛಾಯಾಗ್ರಹಣ ಕುರಿತ ಒಂದು ಗರಿಯ ಕಥೆ ವಿಶೇಷ ಪುಸ್ತಕದ ಬಿಡುಗಡೆ ಹಾಗೂ ನಿಸರ್ಗದ ಫೋಟೋ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇ-ಪುಸ್ತಕ ಅವತರಣಿಕೆಗಳನ್ನು ಪುತ್ತೂರು ನರಸಿಂಹ ನಾಯಕ್ ಹಾಗೂ ಕೆ.ಜಿ.ಶೆಣೈ ಬಿಡುಗಡೆಗೊಳಿಸಿದರು. ನಿಸರ್ಗದ ಫೋಟೋ ಪ್ರದರ್ಶನವನ್ನು ಸುರೇಶ್ ಪಡ್ನವೀಸ್ ಉದ್ಘಾಟಿಸಿದರು. ವೆಬ್‌ಸೈಟ್ ಲೋಕಾರ್ಪಣೆಯನ್ನು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ನರೇಂದ್ರ ನಾಯಕ್ ಮತ್ತು ಉಷಪ್ರಭಾ ನಾಯಕ್ ಮಾಡಿದರು.
ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆ, ವಿಟ್ಲ ಜೆಸಿಐ ವಿದ್ಯಾಸಂಸ್ಥೆ, ವಿಠಲ ಪದವಿಪೂರ್ವ ಕಾಲೇಜು, ಸರ್ಕಾರಿ ಮಾದರಿ ಶಾಲೆ, ಸಿರಿ ವಿದ್ಯಾಸಂಸ್ಥೆ ಸಾಲೆತ್ತೂರು, ಸರಸ್ವತಿ ವಿದ್ಯಾಲಯ ಕನ್ಯಾನ ಸೇರಿ ಗಣ್ಯರಿಗೆ ಪುಸ್ತಕದ ಪ್ರತಿಯನ್ನು ನೀಡಲಾಯಿತು.
ನಿವೃತ್ತ ಪ್ರಾಂಶುಪಾಲ ಅನಂತಕೃಷ್ಣ ಹೆಬ್ಬಾರ್, ಸಕಲೇಶಪುರ ಸೀನಿಯರ್ ಸಿವಿಲ್ ಜಡ್ಜ್ ಆಂಡ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜಯಪ್ರಕಾಶ್ ವಿ., ಜೆಸಿಐ ಹಿರಿಯ ತರಬೇತುದಾರ ಶ್ರೀಧರ್ ಕೊಡಕ್ಕಲ್, ಡಾ.ಅರುಂಧತಿ ಧಾರೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.
ಉದ್ಯಮಿ ಪಿ. ರಾಧಾಕೃಷ್ಣ ಪೈ ಸ್ವಾಗತಿಸಿ, ಪ್ರಸ್ತಾವನೆಗೈದರು. ಉದ್ಯಮಿ ಸುಬ್ರಾಯ ಪೈ ವಂದಿಸಿದರು. ಶಿಕ್ಷಕ ಅರವಿಂದ ಕುಡ್ಲ ಕಾರ್ಯಕ್ರಮ ನಿರೂಪಿಸಿದರು.
"
ಕೆಲಸದಲ್ಲಿ ಪರಿಪೂರ್ಣತೆ ಹಾಗೂ ಅಟ್ಟುಕಟ್ಟುತನ ಮುಖ್ಯವಾಗಿದೆ. ಛಾಯಾಗ್ರಹಣಕ್ಕೆ ಅದರದ್ದೇ ಆದ ಜಾಗಗಳು ಆವಶ್ಯಕವಾಗಿದ್ದು, ತಾಳ್ಮೆಯಿಂದ ಕಾಯುವುದು ಬಹಳ ಅಗತ್ಯವಾಗಿದೆ. ಪಕ್ಷಿಗಳ ಜೀವನ ಶೈಲಿಯನ್ನು ಅರಿತುಕೊಂಡಾಗ ಗಂಡು ಪ್ರಭೇದ ಬಹಳಷ್ಟು ಚಂದ ಎಂಬುದನ್ನು ತಿಳಿಯಬಹುದು.