ವಿಟ್ಲ: ಭಾ.ಕೃ.ಸಂ.ಪ. ಕೇಂದ್ರೀಯ ತೊಟದ ಬೆಳೆಗಳ ಸಂಶೋಧನಾ ಸಂಸ್ಥೆ ವಿಟ್ಲ ಪ್ರಾಂತೀಯ ಕ್ಷೇತ್ರ ಮತ್ತು ಅಡಿಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಸಂಯುಕ್ತ ಆಶ್ರಯದಲ್ಲಿ ಅಡಕೆ ಎಲೆಚುಕ್ಕಿ ಮತ್ತು ಇತರ ಶಿಲೀಂದ್ರ ರೋಗಗಳ ನಿರ್ವಹಣೆ ಕೃಷಿ ವಿಚಾರಗೊಷ್ಠಿ ಮತ್ತು ಸಂವಾದ ಕಾರ್ಯಕ್ರಮ ಆ.೩೦ರಂದು ವಿಟ್ಲ ಮಂಗಳ ಮಂಟಪದಲ್ಲಿ ನಡೆಯಲಿದೆ.
ಬೆಳಗ್ಗೆ ೧೦ಗಂಟೆಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದು, ಸಿಪಿಸಿಆರ್ ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಚ್ಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಪತ್ರಕರ್ತ ಶ್ರೀಪಡ್ರೆ, ಕೃಷಿ ಸಂಶೋಧಕ ಶಂಕರ ಭಟ್ ಬದನಾಜೆ ಭಾಗವಹಿಸಲಿದ್ದಾರೆ.
೧೦.೩೦ರಿಂದ ಮಧ್ಯಾಹ್ನ ೧ರ ವರೆಗೆ ಅಡಕೆಗೆ ಬಾಧಿಸುವ ಎಲೆಚುಕ್ಕಿ ಮತ್ತು ಇತರ ಶಿಲೀಂದ್ರ ರೋಗಗಳ ಸಮಗ್ರ ನಿರ್ವಹಣೆ ಬಗ್ಗೆ ಡಾ. ವಿನಾಯಕ ಹೆಗ್ಡೆ, ಅಡಕೆ ಮರದ ಆರೋಗ್ಯ ವೃದ್ಧಿಸುವಲ್ಲಿ ಪೋಷಕಾಂಶ ನಿರ್ವಹಣೆಯಾ ಮಹತ್ವದ ಬಗ್ಗೆ ಡಾ. ರವಿ ಭಟ್, ಪೋಷಕಾಂಶ ಕೊರತೆ, ರೋಗ ಮತ್ತು ಕೀಟಗಳನ್ನು ಅಡಕೆ ತೋಟದಲ್ಲಿ ಗುರುತಿಸುವಿಕೆ ಪುರಂದರ ಕೂಟೇಲು, ಎಲೆಚುಕ್ಕಿ ರೋಗವನ್ನು ಯಶಸ್ವಿಯಾಗೊ ನಿರ್ವಹಣೆ ಮಾಡಿದ ಕೃಷಿಕರ ಅನುಭವದ ಮಾತು ಏತಡ್ಕ ಗಣಪತಿ ಭಟ್ ಮತ್ತು ಸತೀಶ್ ರಾವ್ ತಾಂತ್ರಿಕ ಮಾಹಿತಿ ನೀಡಲಿದ್ದಾರೆ. ೨ರಿಂದ ೩.೩೦ರಿಂದ ಡಾ. ಕೆ.ಬಿ. ಹೆಬ್ಬಾರ್, ಡಾ. ವಿನಾಯಕ ಹೆಗ್ಡೆ, ಡಾ. ರವಿ ಭಟ್ ಮತ್ತು ಇತರ ವಿಜ್ಞಾನಿಗಳ ಜತೆಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.