ವಿಠಲ ವೈಭವ 19ರಂದು

vittal
Published on

ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಮಯೂರ ನೃತ್ಯ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನ. 19 ರಂದು ಮಧ್ಯಾಹ್ನ 3.30ಕ್ಕೆ ವಿಠಲ ವೈಭವ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ವಿದುಷಿ ಹೇಮಾ ವಾಘ್ಮೂೕಡೆ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಂದರ ದಾಸರ ಸುಮಾರು 40 ರಚನೆಗಳಿಗೆ ನೃತ್ಯವನ್ನು ಸಂಯೋಜಿಸಿ ವಿಠಲ ವೈಭವ ಎಂಬ ನೃತ್ಯ ಪ್ರದರ್ಶನವನ್ನು ಪ್ರಸ್ತುತ ಪಡಿಸಲಾಗುವುದು. ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪುರಂದರ ದಾಸರ ದಾಸ ಸಾಹಿತ್ಯ ಮಾತ್ರವಲ್ಲ, ಆಧ್ಯಾತ್ಮಿಕ ವಿಚಾರಗಳನ್ನು ತಿಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ತಬಲಾದಲ್ಲಿ ಪಿಎಚ್​ಡಿ ಪಡೆದ ಕಲಾವಿದ ಡಾ. ನಾಗಲಿಂಗ ಮುರಗಿ ಹಾಗೂ ಅಖಿಲ ಭಾರತೀಯ ಗಂಧರ್ವ ಕಾಲೇಜಿನಲ್ಲಿ ನೃತ್ಯ ಅಲಂಕಾರ ಪರೀಕ್ಷೆಯನ್ನು ಪೂರ್ಣಗೊಳಿಸಿದ ಸಂಸ್ಥೆಯ ಐವರು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಅಧ್ಯಕ್ಷ ಸಂತೋಷ ಶೆಟ್ಟಿ, ಚಿನ್ಮಯ ಸೇವಾ ಸಮಿತಿ ಟ್ರಸ್ಟಿ ಗಿರೀಶ ಉಪಾಧ್ಯಾಯ, ಶ್ರೀದೇವಿ ಕಾಮತ ಭಾಗವಹಿಸುವರು ಎಂದು ತಿಳಿಸಿದರು.

ಅಕಾಡೆಮಿ ಕಾರ್ಯದರ್ಶಿ ದಿನೇಶ ವಾಘ್ಮೂೕಡೆ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net