ನಾಡಿನ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ

Visvesvaraya's contribution to the development of the country is immense
ರಬಕವಿ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಇಂಜಿನಿಯರ್ಸ್ ದಿವಸ ಸಮಾರಂಭಕ್ಕೆ ಪೌರಾಯುಕ್ತ ಜಗದೀಶ ಈಟಿ ಚಾಲನೆ ನೀಡಿದರು. ಸಿದ್ದರಾಜ ಪೂಜಾರಿ, ಚಂದ್ರಶೇಖರ ಮಿರ್ಜಿ ಇದ್ದರು.
Published on

ರಬಕವಿ-ಬನಹಟ್ಟಿ: ಸರ್ ಎಂ. ವಿಶ್ವೇಶ್ವರಯ್ಯ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ರಬಕವಿ-ಬನಹಟ್ಟಿ ನಗರಸಭೆ ಪೌರಾಯುಕ್ತ ಜಗದೀಶ ಈಟಿ ಹೇಳಿದರು.

ರಬಕವಿ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ತಾಲೂಕಿನ ಮಹಾಲಿಂಗಪುರ, ತೇರದಾಳ ವ್ಯಾಪ್ತಿಯ ಇಂಜಿನಿಯರಿಂಗ್ ಅಸೋಸಿಯೇಷನ್ ಅಡಿಯಲ್ಲಿ ಶನಿವಾರ ಹಮ್ಮಿಕೊಂಡ ಇಂಜಿನಿಯರ್ಸ್ ದಿವಸ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರದ ನಿಯಮಾನುಸಾರ ಕಟ್ಟಡಗಳನ್ನು ನಿರ್ಮಿಸಬೇಕು. ಅಂದಾಗ ಮಾತ್ರ ನೈಸರ್ಗಿಕ ಸವಲತ್ತುಗಳನ್ನು ಪಡೆಯಬಹುದು ಎಂದರು.

ಸಾಹಿತಿ ಸಿದ್ದರಾಜ ಪೂಜಾರಿ ಮಾತನಾಡಿ, ಭವಿಷ್ಯದ ಭಾರತ ನಿರ್ಮಾಣ ಮಾಡುವವರೆ ಇಂಜಿನಿಯರಗಳು. ನಿಮ್ಮ ಶ್ರಮ ಸದೃಢ ಭಾರತ ನಿರ್ಮಾಣ ಮಾಡುತ್ತದೆ. ದೇಶದಲ್ಲಿ ಪ್ರತಿಭಾವಂತ ಅಭಿಯಂತರರಿಗೆ ಕೊರತೆ ಇಲ್ಲ. ಗ್ರಾಮ, ನಗರಗಳ ಪ್ರಗತಿಗಾಗಿ ಹೊಸ ಆವಿಷ್ಕಾರಗಳೊಂದಿಗೆ ಶ್ರವವಹಿಸಿ ಎಂದು ಸಲಹೆ ನೀಡಿದರು.

ಅವಳಿ ನಗರದ ಇಂಜಿನಿಯರರ ಸಂಘದ ಅಧ್ಯಕ್ಷ ಚಂದ್ರಶೇಖರ ಮಿರ್ಜಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದ ವೇದಿಕೆ ಮೇಲೆ ಶ್ರೀಶೈಲ ಅವಟಿ, ವೈಶಾಲಿ ಹಿಪ್ಪರಗಿ, ಶಿವಾನಂದ ಕನಾಳ, ಮೌನೇಶ ಬಡಿಗೇರ, ಎಸ್. ಐ. ಕುಂದಗೋಳ, ವಿಠ್ಠಲ ಚಿಕ್ಕಲಕಿ, ಶಿವು ಬಾಡಗಿ, ಪ್ರವೀಣಕುಮಾರ ಪಾವಟೆ, ವರ್ದಮಾನ ಯಲಗುದರಿ, ಸುಧಾಕರ ಅಮ್ಮಣಗಿ, ಸಮರ್ಥ ತೆಗ್ಗಿ, ಸಚಿನ್ ನಿಂಗಸಾನಿ, ಸುನೀಲ ಹುಲಗಬಾಳಿ, ಸಂತೋಷ ಅರೇನಾಡ, ಬಸವರಾಜ ನುಚ್ಚಿ ಇದ್ದರು.

ರಬಕವಿ-ಬನಹಟ್ಟಿ, ಮಹಾಲಿಂಗಪುರ, ತೇರದಾಳ ಸೇರಿ ವಿವಿಧೆಡೆ 180 ಕ್ಕೂ ಅಧಿಕ ಯುವ ಇಂಜಿನಿಯರಗಳು ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಪ್ರಶಾಂತ ಅಂಬಿ, ಸುರೇಶ ಪಟ್ಟಣಶೆಟ್ಟಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net