ನಾಡಿಗೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ

MLK Janma Dina.. sep- 15_
Published on

ಮೊಳಕಾಲ್ಮೂರು: ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನಾಡು ಕಂಡು ಅಪರೂಪದ ಇಂಜಿನಿಯರ್ ಆಗಿದ್ದು, ಮೈಸೂರು ರಾಜಪ್ರಭುತ್ವದ ಆಳ್ವಿಕೆಯಲ್ಲಿ ಅವರು ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ ಎಂದು ತಹಸೀಲ್ದಾರ್ ಎಂ.ವಿ.ರೂಪಾ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಲೋಕೋಪಯೋಗಿ ಇಲಾಖೆ, ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ವಿಶ್ವೇಶ್ವರಯ್ಯ ಜನ್ಮದಿನ ಅಂಗವಾಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಇಂಜಿನಿಯರ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆರೆ, ಕಟ್ಟೆ, ಜಲಾಶಯಗಳ ನಿರ್ಮಾಣದ ಮೂಲಕ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಅವರ ಸೇವೆ ಸ್ಮರಣೀಯ ಎಂದರು.

ವಕೀಲ ರಾಜಶೇಖರನಾಯಕ ಮಾತನಾಡಿ, ನಾಡಿನ ಕಣ್ಮಣಿ ವಿಶ್ವೇಶ್ವರಯ್ಯ ಕರುನಾಡಿನ ಏಳಿಗೆಗೆ ಶ್ರಮಿಸಿದವರಲ್ಲಿ ಪ್ರಮುಖ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

ಇಂದಿನ ಯುವಪೀಳಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸ್ವಾರ್ಥ ಜೀವನಕ್ಕಾಗಿ ಜ್ಞಾನ ಸಂಪತ್ತು ಮಾರಾಟ ಮಾಡಿಕೊಳ್ಳಬಾರದು. ಸಮಾಜದ ಹೊಣೆಗಾರಿಕೆ ನಿರ್ವಹಿಸುವಲ್ಲಿ ಮುಂದಾಳತ್ವ ವಹಿಸಿಕೊಳ್ಳಬೇಕು. ಈ ಮೂಲಕ ಮರಣದ ಬಳಿಕವೂ ಜೀವಂತವಾಗಿ ಉಳಿಯಲು ಸಾಧ್ಯ ಎಂದರು.

ಕಸಾಪ ತಾಲೂಕಾಧ್ಯಕ್ಷ ಜಿಂಕಾ ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಎಸ್.ಈರಣ್ಣ, ಪ್ರಾಚಾರ್ಯ ಬಿ.ಗೋವಿಂದಪ್ಪ, ಉಪನ್ಯಾಸಕರಾದ ಬಿ.ಎನ್.ತಿಪ್ಪೇಸ್ವಾಮಿ, ಸಿ.ರವಿಕುಮಾರ್, ಟಿ.ಮಂಜುನಾಥ, ಇಂಜಿನಿಯರ್ ಕೆ.ನಾಗನಗೌಡ, ಹರಿಶ್ಚಚಂದ್ರ, ನ್ಯಾಯವಾದಿ ಎಂ.ಎನ್.ವಿಜಯಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net