

ಚಿಕ್ಕಮಗಳೂರು: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮ ಇಂದಿನ ಯುವ ಇಂಜಿನಿಯರ್‌ಗಳಿಗೆ ಪ್ರೇರಣೆ ಎಂದು ನಗರದ ಎಐಟಿ ಕಾಲೇಜು ಪ್ರಾಚಾರ್ಯ ಡಾ.ಜಯದೇವ್ ತಿಳಿಸಿದರು.
ನಗರದ ಸಿವಿಲ್ ಇಂಜಿನಿರ‍್ಸ್ ಅಸೋಸಿಯೇಷನ್‌ನಿಂದ ಎಐಟಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಶಿಕ್ಷಣ, ಕೈಗಾರಿಕೆ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪಾಂಡಿತ್ಯ ಹೊಂದಿದ್ದ ಬಹುಮುಖ ಪ್ರತಿಭೆ. ಅವರಲ್ಲಿದ್ದ ವ್ಯಕ್ತಿ ಬಗೆಗಿನ ಕಾಳಜಿ, ಶ್ರದ್ದೆ ಅವರ ಆದರ್ಶ ಮತ್ತು ಆಶಯಗಳನ್ನು ಇಂದಿನ ಯುವ ಇಂಜಿನಿಯರ್‌ಗಳು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಿವಿಲ್ ಇಂಜಿನಿರ‍್ಸ್ ಸಂಘದ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಸಿವಿಲ್ ಇಂಜಿನಿಯರಿAಗ್ ವೃತ್ತಿ ಅತ್ಯಂತ ಸ್ಪರ್ಧಾತ್ಮಕ ವೃತ್ತಿಯಾಗಿದೆ. ಅದರಲ್ಲಿ ವೃತ್ತಿ ಕೌಶಲ್ಯ, ಸಹಿಷ್ಣುತೆ, ನಿರಂತರ ಕೌಶಲ್ಯಾಭಿವೃದ್ಧಿ ಮತ್ತು ಕಾರ್ಯಾನುಭವಗಳಿಂದ ಮಾತ್ರ ಸಿವಿಲ್ ಇಂಜಿನಿರ‍್ಸ್ಗಳು ತಮ್ಮ ಜೀವನದಲ್ಲಿ ಉನ್ನತ ಶ್ರೇಣಿಗೆ ತಲುಪಬಹುದು. ಈ ದಿಸೆಯಲ್ಲಿ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿರ‍್ಸ್ಗೆ ಅಗತ್ಯವಾದ ಕೆಪಿಸಿಇ ಕಾಯ್ಕೆ ಮುಂದಿನ ದಿನಗಳಲ್ಲಿ ಭರವಸೆಯ ಆಶಾಕಿರಣವಾಗಲಿದೆ ಎಂದರು.
ಕೆಪಿಸಿಇ ಕಾಯ್ದೆ ಕುರಿತು ಉಪನ್ಯಾಸ ನೀಡಿದ ಶ್ರೀಕಾಂತ್, ಪರಿಣಿತರಲ್ಲದವರ ಪ್ರವೇಶದಿಂದಾಗಿ ನಿರ್ಮಾಣ ಹಂತದಲ್ಲೇ ಹಲವು ಸೇತುವೆ ಮತ್ತು ಕಟ್ಟಡಗಳು ಕುಸಿದು ಬೀಳುತ್ತಿವೆ. ಇದರಿಂದ ಪರಿಣಿತ ಇಂಜಿನಿಯರ್‌ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಕೆಪಿಸಿಇ ಕಾಯ್ದೆ ಜಾರಿಗೆ ಬಂದಲ್ಲಿ ಇಂತಹ ಅನಾಹುತಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ತಿಳಿಸಿದರು.
ಕೆಪಿಸಿಇ ಸಂಸ್ಥಾಪಕ ಸದಸ್ಯೆ ಎಂ.ಆರ್.ಕಲ್ಗಲ್, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಅಜಿತ್‌ಕುಮಾರ್, ಪ್ರಮುಖರಾದ ಡಾ. ಎಂ.ಜೆ. ಅಶ್ವಥ್, ಕಿರಣ್, ಬಿ.ಎಂ. ರವಿಶಂಕರ್, ಅಬ್ದುಲ್ ಕಬೀರ್, ಟಿ. ನಾರಾಯಣಸ್ವಾಮಿ, ಕೆ.ಪಿ. ನಾಗೇಂದ್ರ ಉಪಸ್ಥಿತರಿದ್ದರು.