

ಬಾಳೆಹೊನ್ನೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಿತಿಮೀರಿ ಮೊಬೈಲ್ ಬಳಸುತ್ತಿರುವುದರಿಂದ ಮಕ್ಕಳಲ್ಲಿ ದೃಷ್ಟಿ ದೋಷ ಕಂಡುಬರುತ್ತಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್ ಹೇಳಿದರು.
ರೋಟರಿ ಕ್ಲಬ್‌ನಿಂದ ಮಾಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಇದು ವಿದ್ಯಾರ್ಥಿ ಜೀವನದಲ್ಲಿ ದುರಭ್ಯಾಸವಾಗಿ ಪರಿಣಮಿಸಿದೆ. ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸಬೇಕು ಎಂದರು. ತಪಾಸಣೆ ಶಿಬಿರದಲ್ಲಿ ಹತ್ತು ವಿದ್ಯಾರ್ಥಿಗಳಲ್ಲಿ ಕಣ್ಣಿನ ದೋಷ ಕಂಡುಬಂದಿದ್ದು, ಅವರಿಗೆ ರೋಟರಿ ಕ್ಲಬ್‌ನಿಂದ ಉಚಿತವಾಗಿ ಕನ್ನಡಕ ನೀಡಲಾಗುವುದು ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಟಿ.ಸುದೇಶ್, ಮುಖ್ಯಶಿಕ್ಷಕ ರಮೇಶ್ ನಾಯಕ್, ನೇತ್ರ ತಪಾಸಣಾಧಿಕಾರಿ ಸಲ್ಮಾನ್, ರೋಟರಿ ಕ್ಲಬ್ ಖಜಾಂಚಿ ಎಚ್.ಕೆ.ವೆಂಕಟೇಶ್ ಭಟ್ ಇತರರಿದ್ದರು.