

ಬಣಕಲ್: ಅತಿಯಾದ ಮೊಬೈಲ್ ಬಳಕೆಯಿಂದ ದೃಷ್ಟಿದೋಷ ಉಂಟಾಗುತ್ತದೆ ಎಂದು ಬಣಕಲ್ ಹಿರೇಬೈಲ್ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಗ್ರಾಪಂನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘ ಮತ್ತು ಗ್ರಾಪಂನಿಂದ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಕಂಪ್ಯೂಟರ್, ಮೊಬೈಲ್ ಅತಿಯಾದ ಬಳಕೆ ಕಣ್ಣಿಗೆ ಆಯಾಸ ಉಂಟು ಮಾಡುತ್ತದೆ. ಬದಲಾದ ಜೀವನ ಶೈಲಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಯಸ್ಸು, ಮಾಲಿನ್ಯ, ಒತ್ತಡ, ಅನಾರೋಗ್ಯಕರ ಆಹಾರ ಮುಂತಾದವು ದೃಷ್ಟಿ ಸಮಸ್ಯೆ ಹೆಚ್ಚಿಸುತ್ತವೆ ಎಂದರು.
ಬಣಕಲ್ ಪಿಡಿಒ ಕೃಷ್ಣಪ್ಪ ಮಾತನಾಡಿ, ನಿಯಮಿತ ಕಣ್ಣು ಪರೀಕ್ಷೆಯಿಂದ ದೃಷ್ಟಿ ಸಮಸ್ಯೆಯನ್ನು ಪತ್ತೆ ಹಚ್ಚಬಹುದು. ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳಬೇಕು ಎಂದರು.
200ಕ್ಕೂ ಹೆಚ್ಚು ಮಂದಿ ತಪಾಸಣಾ ಮಾಡಿಸಿಕೊಂಡರು. ಬಣಕಲ್ ಗ್ರಾಪಂ ಅಧ್ಯಕ್ಷೆ ಆತೀಕಾ ಬಾನು, ಉಪಾಧ್ಯಕ್ಷ ಸಿರಾಜ್, ಸದಸ್ಯರಾದ ಇರ್ಫಾನ್, ಮಧುಕುಮಾರ್, ಸಮಾಜ ಸೇವಕ ಆರೀಪ್, ವಿಷನ್ ಸ್ಟ್ರಿಂಗ್ ಸಂಸ್ಥೆ ವ್ಯವಸ್ಥಾಪಕ ಜಯಪಾಲ್, ವೈದ್ಯರಾದ ಮಾನಸಾ, ದಿವ್ಯಾ ಹಾಗೂ ಸಿಬ್ಬಂದಿ ಪರಾನಾ, ಬ್ರಹ್ಮಶ್ರೀ ನಾರಾಯಣಗುರು ಮಲಯಾಳಿ ಸಂಘದ ಪದಾಧಿಕಾರಿಗಳು ಇದ್ದರು.